ರಾಜಸ್ಥಾನ್: ಪತಿಯನ್ನು ಬಿಟ್ಟು ಪ್ರಿಯಕರನ ಜತೆ ಮಗಳು ಓಡಿಹೋದ ಆಕ್ರೋಶದಲ್ಲಿ ತಂದೆ ಪ್ರಿಯಕರನ ಮನೆಗೆ ಹೋಗಿ ಇಬ್ಬರನ್ನು ಹತ್ಯೆಗೈದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಏನಿದು ಘಟನೆ:
ಅನಿಲ್ ಜಾಟ್ (40ವರ್ಷ) ಎಂಬಾತನ ಪುತ್ರಿ ಸುಮನ್ ಪತ್ನಿಯನ್ನು ಬಿಟ್ಟು, ಪ್ರಿಯಕರ ಕೃಷ್ಣ ಎಂಬಾತನ ಜತೆಪರಾರಿಯಾಗಿದ್ದಳು. ಈ ವಿಷಯ ತಿಳಿದ ಅನಿಲ್, ನೇರವಾಗಿ ಕೃಷ್ಣನ ಮನೆಗೆ ತೆರಳಿ, ಒಂದು ವೇಳೆ ನನ್ನ ಮಗಳು ವಾಪಸ್ ಬಾರದಿದ್ದರೆ ಮುಂದೆನಾಗುತ್ತೆ ನೋಡಿ ಎಂದು ಬೆದರಿಕೆ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ ಇಬ್ಬರೂ ವಾಪಸ್ ಆಗಿಲ್ಲವಾಗಿತ್ತು. ಇದರಿಂದ ಕೋಪಗೊಂಡ ತಂದೆ ಅನಿಲ್ ಜುನ್ ಜುನು ಎಂಬಲ್ಲಿಗೆ ತೆರಳಿ ಅಲ್ಲಿ ಕೃಷ್ಣನ ಮನೆಗೆ ಹೋಗಿ ಆತನ ಸಹೋದರ ದೀಪಕ್ (20ವರ್ಷ) ಹಾಗೂ ಆತನ ಗೆಳೆಯ ನರೇಶ್ (19ವರ್ಷ)ಎಂಬಾತನನ್ನು ಹತ್ಯೆಗೈದಿದ್ದ.
ಕೃಷ್ಣನ ಮನೆಯ ಮಹಡಿ ಮೇಲೆ ಮಲಗಿದ್ದ ಇಬ್ಬರನ್ನೂ ಯುವತಿಯ ತಂದೆ ಕೊಡಲಿಯಿಂದ ಕಡಿದು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿ ದೇವೇಂದ್ರ ಪ್ರತಾಪ್ ತಿಳಿಸಿದ್ದಾರೆ.