Advertisement

Missing; ಶಬರಿಮಲೆಯಲ್ಲಿ ಕನ್ನಡಿಗ ಸೇರಿ 9 ಮಂದಿ ಯಾತ್ರಿಕರು ನಾಪತ್ತೆ: ಹುಡುಕಾಟ

07:44 PM Jan 25, 2024 | |

 ಪತ್ತನಂತಿಟ್ಟ:ಇತ್ತೀಚೆಗೆ ಮುಕ್ತಾಯಗೊಂಡ ಎರಡು ತಿಂಗಳ ಶಬರಿಮಲೆ ಯಾತ್ರೆಯಲ್ಲಿ9  ಮಂದಿ ನಾಪತ್ತೆಯಾಗಿದ್ದಾರೆ ಎಂದು ಕೇರಳ ಪೊಲೀಸರು ಗುರುವಾರ ಹೇಳಿದ್ದು,  ಪತ್ತೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ.

Advertisement

9  ಜನರು 2023  ನವೆಂಬರ್ 15 ಮತ್ತು ಜನವರಿ 20 ರ ನಡುವೆ ನಾಪತ್ತೆಯಾಗಿದ್ದಾರೆ. ಈ ಘಟನೆಗಳು ಪಂಪಾ, ನಿಲಕ್ಕಲ್ ಸೇರಿದಂತೆ ಸನ್ನಿಧಾನಂ ಸ್ಥಳಗಳಿಂದ ವರದಿಯಾಗಿದೆ. ಈ ನಾಪತ್ತೆ ಪ್ರಕರಣಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಗೆ ಪಂಪಾ ಪೊಲೀಸರು ಪೂರ್ವಭಾವಿ ಕ್ರಮಗಳನ್ನು ಕೈಗೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿ.ಅಜಿತ್ ಅವರ ನೇರ ಆದೇಶದ ಮೇರೆಗೆ ಪ್ರಸ್ತುತ ಸಮಗ್ರ ತನಿಖೆ ಪ್ರಗತಿಯಲ್ಲಿದೆ. ನಾಪತ್ತೆಯಾದವರಲ್ಲಿ ತಮಿಳುನಾಡಿನ ನಾಲ್ವರು, ಕೇರಳದ ಕೋಝಿಕ್ಕೋಡ್‌ನಿಂದ ಒಬ್ಬರು, ಆಂಧ್ರಪ್ರದೇಶದ ಇಬ್ಬರು ಮತ್ತು ಕರ್ನಾಟಕ ಮತ್ತು ತೆಲಂಗಾಣದಿಂದ ತಲಾ ಒಬ್ಬರು ಸೇರಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next