Advertisement

ದೇವಾಲಯದಲ್ಲಿ ನಿಧಿಗಾಗಿ ಶೋಧ

05:12 PM Mar 29, 2022 | Team Udayavani |

ಆನಂದಪುರ: ಸಮೀಪದ ಕಾಸ್ಪಾಡಿ ಗ್ರಾಮದ ಈಶ್ವರ- ಬಸವಣ್ಣ ದೇವಸ್ಥಾನದಲ್ಲಿ ದೇವರ ಪಾಣಿಪೀಠ ಕಿತ್ತು ನಿಧಿಗಾಗಿ ಶೋಧ ನಡೆಸಿದ ಘಟನೆ ನಡೆದಿದೆ.

Advertisement

ದೇವಾಲಯದಲ್ಲಿ ನಿಧಿ ಇರಬಹುದೆಂದು ದೇವರ ಪಾಣಿಪೀಠ ಮೂರ್ತಿಗಳನ್ನು ಕಿತ್ತು ಸುಮಾರು ಎರಡರಿಂದ ಮೂರು ಅಡಿ ಆಳದ ಗುಂಡಿಯನ್ನು ಮಾಡಿ ನಿಧಿಗಾಗಿ ಶೋಧ ನಡೆಸಿದ್ದಾರೆ.

ಗ್ರಾಮಸ್ಥರಿಂದ ಈ ದೇವಾಲಯದಲ್ಲಿ ವಾರಕ್ಕೆ ಒಂದು ದಿನ ದೇವರಿಗೆ ಪೂಜೆ ನಡೆಯುತ್ತಿತ್ತು. ದೇವರ ಮೂರ್ತಿಯ ಕೆಳಭಾಗದಲ್ಲಿ ಚೌಕಾಕಾರದ ಬಾಕ್ಸ್‌ ರೀತಿಯಲ್ಲಿ ಗೋಚರವಾಗಿದೆ. ನಿಧಿ ಇರಬಹುದಾದ ಬಾಕ್ಸ್‌ ಇದಾಗಿರಬಹುದೆಂದು ಸ್ಥಳೀಯರು ಅನುಮಾನಿಸುತ್ತಿದ್ದಾರೆ.

ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next