ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಶಂಕಿತನ ಪತ್ತೆಗೆ ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸು ತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಶಂಕಿತ ಬೆಂಗಳೂರಿನಿಂದ ತುಮ ಕೂರು, ಬಳ್ಳಾರಿ, ಕಲಬುರಗಿ ತೆರಳಿರುವ ಸಿಸಿ ಕ್ಯಾಮೆರಾ ದೃಶ್ಯಗಳು ಪತ್ತೆಯಾ ಗಿದ್ದು ಒಂದು ತಂಡ ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೂಂದು ತಂಡ ಇಲ್ಲಿಂದ ಎಲ್ಲಿಗೆ ಹೋಗಿದ್ದಾನೆ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಜತೆಗೆ ನೆರೆಯ ಹೈದ್ರಾಬಾದ್‌ನಲ್ಲೂ ಶಂಕಿತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶಂಕಿತ ಬಳ್ಳಾರಿಯಲ್ಲಿ ಕಲಬುರಗಿ ಬಸ್ ಹತ್ತಿರುವ ಸಿಸಿ ಕ್ಯಾಮೆರಾ ದೃಶ್ಯಾ ವಳಿ ಸಿಕ್ಕಿದೆ. ಕಲಬುರಗಿ ನಿಲ್ದಾಣದಲ್ಲಿ ಬಸ್ ಇಳಿದಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಆತ ಬಳ್ಳಾರಿ- ಕಲಬುರಗಿ ಮಾರ್ಗ ಮಧ್ಯೆಯೇ ಇಳಿದು ಹೈದ್ರಾಬಾದ್ ಕಡೆಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮತ್ತೂಂದೆಡೆ ಶಂಕಿತ ರಾಮೇಶ್ವರಂ ಕೆಫೆಯ ಇತರೆ ಶಾಖೆಗಳಿಗೆ ಭೇಟಿ ನೀಡಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ದೃಶ್ಯಾವಳಿ ಪರಿಶೀಲಿಸಿದ್ದಾರೆ. ಆದರೆ, ಶಂಕಿತ ಇತರೆ ಶಾಖೆಗಳಿಗೂ ಭೇಟಿ ನೀಡಿರುವ ಅನುಮಾನದ ಮೇರೆಗೆ ಇಂದಿರಾ ನಗರ, ಜೆ.ಪಿ.ನಗರ, ರಾಜಾಜಿನಗರದ ಶಾಖೆಗಳಲ್ಲಿನ ಸಿಸಿ ಕ್ಯಾಮರಾ ಪರಿಶೀಲನೆ ನಡೆಯುತ್ತಿದೆ. ಮಾ.1ರ ಹಿಂದಿನ 20 ದಿನಗಳ ಸಿಸಿ ಕ್ಯಾಮೆರಾ ಸಂಗ್ರಹಿಸಿ ಪರಿಶೀಲಿಸುತ್ತಿದ್ದಾರೆ.
ಪೂರ್ವ ನಿಯೋಜಿತ ಕೃತ್ಯ: ಶಂಕಿತ ಕುಂದಲಹಳ್ಳಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸುವ ಮೊದಲು ಆ ಹೋಟೆಲ್ ಬಗ್ಗೆ ಚೆನ್ನಾಗಿ ತಿಳಿದು ಕೊಂಡಿದ್ದಾನೆ. ಪಕ್ಕಾ ಅಧ್ಯಯನ ನಡೆಸಿ ಪೂರ್ವ ನಿಯೋಜಿತದಂತೆ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.