Advertisement
ಎಸ್‌ಐಟಿ ಅಧಿಕಾರಿಗಳು ಬಂಧಿಸುವ ವೇಳೆ ಪ್ರಜ್ವಲ್ ಕೈಯಲ್ಲಿದ್ದ ಮೊಬೈಲ್ ಅನ್ನು ವಶಪಡಿಸಿಕೊಂಡಿರುವ ಎಸ್‌ಐಟಿ ತಂಡವು ಅದನ್ನು ಈಗಾಗಲೇ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್ಎಸ್‌ಎಲ್) ಕಳುಹಿಸಿದೆ. ಎಫ್ಎಸ್‌ಎಲ್ ತಜ್ಞರು ಮೊಬೈಲ್ ರಿಟ್ರೈವ್ ಮಾಡಿ ಹಿಂದೆ ಅದರಲ್ಲಿದ್ದ ವೀಡಿಯೋ, ವಾಟ್ಸ್‌ಆ್ಯಪ್ ಸಂದೇಶ ಇನ್ನೀತರ ಡಿಲೀಟ್ ಆಗಿರುವ ಅಂಶಗಳನ್ನು ಪತ್ತೆ ಹಚ್ಚಲಿದೆ. ಅನಂತರ ಅದರಲ್ಲಿದ್ದ ಅಂಶಗಳನ್ನು ಉಲ್ಲೇಖೀಸಿ ಎಸ್‌ಐಟಿ ಅಧಿಕಾರಿಗಳಿಗೆ ನೀಡಲಿದೆ. ಎಫ್ಎಸ್‌ಎಲ್ ವರದಿ ಬಂದ ಬಳಿಕವೇ ಇದುವೇ ಅಶ್ಲೀಲ ವೀಡಿಯೋ ಸೆರೆಹಿಡಿದ ಮೊಬೈಲ್ ಹೌದೋ, ಅಲ್ಲವೋಎಂಬುದು ದೃಢಪಡಲಿದೆ ಎಂದು ಎಸ್‌ಐಟಿ ಮೂಲಗಳಿ ತಿಳಿಸಿದೆ.
ಪ್ರಜ್ವಲ್ ತಮ್ಮ ಬಳಿ ಇರುವ ಬೇಸಿಕ್ ಮೊಬೈಲ್ ಅನ್ನು ಎಸ್‌ಐಟಿ ಅಧಿಕಾರಿಗಳಿಗೆ ಕೊಟ್ಟಿ¨ªಾರೆ ಎನ್ನಲಾಗಿದೆ. ಬೇರೆ ಮೊಬೈಲ್ ಎಲ್ಲಿದೆ ಎಂದು ವಿಚಾರಿಸಿದಾಗ, ನನ್ನ ಬಳಿ ಇರುವುದು ಇದೊಂದೇ ಫೋನ್. ಬೇರೆ ಫೋನ್ ಎಲ್ಲ ನನ್ನ ಪಿಎ ಹತ್ತಿರ ಇರುತ್ತದೆ ಎಂದು ಹೇಳಿದ್ದಾರೆ ಎಂದು ಗೊತ್ತಾಗಿದೆ. ಎಸ್‌ಐಟಿ ಅಧಿಕಾರಿಗಳು ಅವರು ಕೊಟ್ಟ ಮೊಬೈಲ್‌ನ್ನೇ ಜಪ್ತಿ ಮಾಡಿದ್ದಾರೆ.
Related Articles
Advertisement