Advertisement

ವಿಳಾಸ ಹುಡುಕಿ ಹೊರಟವರು…

10:08 AM Feb 22, 2020 | mahesh |

ಕನ್ನಡದಲ್ಲಿ ಈಗ ಭಿನ್ನ-ವಿಭಿನ್ನ ಶೀರ್ಷಿಕೆಯ ಸಿನಿಮಾಗಳು ಸೆಟ್ಟೇರುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ “ಎಲ್ಲಿ ನನ್ನ ವಿಳಾಸ’. ಸದ್ದಿಲ್ಲದೇ ಚಿತ್ರೀಕರಣ ಮುಗಿಸಿರುವ ಈ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಸಾಗರ.ಎಸ್‌.ಗಾವಡೆ ಈ ಚಿತ್ರದ ನಿರ್ದೇಶಕರು. ತಂದೆ ತಾಯಿ ವಿಳಾಸವೇ ನಮ್ಮ ವಿಳಾಸವಾಗಿರುತ್ತದೆ ಹಾಗೂ ಅವರಿಗೆ ನಾವೇ ಪ್ರೀತಿಯ ವಿಳಾಸವಾಗಿರುತ್ತೇವೆ. ಅಂತಹ ಒಂದು ಪ್ರೀತಿಯ ಪ್ರತೀಕವಾದ ಆ ವಿಳಾಸವನ್ನು ಬಿಟ್ಟು ಹೊರಬಂದ ನಂತರ ಏನೆಲ್ಲಾ ತೊಂದರೆಗಳಾಗುತ್ತವೆ ಎಂಬ ಅಂಶವನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಈ ಚಿತ್ರದಲ್ಲಿ ಎರಡು ಕ್ಲೈಮ್ಯಾಕ್ಸ್‌ ಇದೆಯಂತೆ. ಚಿತ್ರದಲ್ಲಿ ಅಜಯ್‌ ಅದಿತ್‌, ಪವಿತ್ರಾ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಸೂರ್ಯದೀಪ್‌, ಲಕ್ಕಿ ರಘು, ಸಾಕ್ಷಿ, ಸುನಂದ ಮುಂತಾದವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮಹೇಶ್‌ ಜೋಗಿ ಸಂಗೀತವಿದೆ.ಸೋದರನ ಸಿನಿಮಾಕ್ಕೆ ತಾಳಿಕೋಟೆಯ ಸಂತೋಷ್‌.ಎಸ್‌.ಗಾವಡೆ ಹಣ ಹೂಡಿದ್ದಾರೆ. ಇವರೊಂದಿಗೆ ಲತೀಫ್.ಎನ್‌.ನದಾಫ್ ಮತ್ತು ಮಿರ್ಜಾ ನಾದೀರ್‌ಬೇಗ್‌ ಸಹ ನಿರ್ಮಾಪಕರಾಗಿದ್ದಾರೆ.ತಾಳಿಕೋಟೆ, ಯಲ್ಲಾಪುರ, ಶಿರಸಿ, ಬೆಂಗಳೂರು, ಮಂಗಳೂರು,ಉಡುಪಿ, ಹುಣಸಗಿ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next