Advertisement

ಭಟ್ಕಳದಲ್ಲಿ ಬಾಂಬ್‌ ನಿಷ್ಕ್ರಿಯ ದಳ ಸಿಬ್ಬಂದಿಯಿಂದ ಶೋಧ

06:57 AM Apr 30, 2019 | Lakshmi GovindaRaju |

ಭಟ್ಕಳ: ಶ್ರೀಲಂಕಾದ ಕೊಲಂಬೊದಲ್ಲಿ ಸರಣಿ ಬಾಂಬ್‌ ಸ್ಫೋಟ ಸಂಭವಿಸಿದ ಬೆನ್ನಲ್ಲೇ ಸೋಮವಾರ ಉಗ್ರ ನಿಗ್ರಹ ದಳ ಹಾಗೂ ಗುಪ್ತಚರ ಇಲಾಖೆ ಸೂಚನೆ ಮೇರೆಗೆ ಕಾರವಾರದ ಬಾಂಬ್‌ ನಿಷ್ಕ್ರಿಯ ದಳದ ಸಿಬ್ಬಂದಿ ಶ್ವಾನದಳದೊಂದಿಗೆ ಆಗಮಿಸಿ ಭಟ್ಕಳ ತಾಲೂಕಿನ ಮುಖ್ಯ ಪ್ರದೇಶಗಳಲ್ಲಿ ತಪಾಸಣೆ ನಡೆಸಿದ್ದಾರೆ.

Advertisement

ಕೊಲಂಬೊದಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟ ಪ್ರಕರಣದ ಬಳಿಕ ಜಾಡು ಹಿಡಿದು ಹೊರಟ ಎನ್‌ಐಎ ಅಧಿಕಾರಿಗಳಿಗೆ ಕೇರಳಕ್ಕೂ, ಈ ಕೃತ್ಯಕ್ಕೂ ಸಂಬಂಧ ಇದೆ ಎನ್ನುವ ಅಂಶ ಗೊತ್ತಾಗುತ್ತಿದ್ದಂತೆ ತಪಾಸಣೆ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಕಾರವಾರದಿಂದ ಬಂದಿದ್ದ ಬಾಂಬ್‌ ನಿಷ್ಕ್ರಿಯದಳದ ಸಿಬ್ಬಂದಿ, ಬಾಂಬ್‌ ಪರಿಣತಿ ಶ್ವಾನದೊಂದಿಗೆ ಆಗಮಿಸಿ ರೈಲ್ವೆ ನಿಲ್ದಾಣ, ಬಸ್‌ ನಿಲ್ದಾಣ ಸೇರಿ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಿದರು. ಆದರೆ, ಯಾವುದೇ ಸುಳಿವು ದೊರೆತಿಲ್ಲ ಎನ್ನಲಾಗಿದೆ. ರೈಲು ನಿಲ್ದಾಣದಿಂದ ಹತ್ತಿರದಲ್ಲಿಯೇ ಇರುವ ಸುರಂಗ ಮಾರ್ಗದ ತಪಾಸಣೆ ಕೂಡ ನಡೆಸಲಾಗಿದ್ದು, ಯಾವುದೇ ಸುಳಿವು ದೊರೆತಿಲ್ಲ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next