Advertisement

ಕೋವಿಡ್ ನಿಯಂತ್ರಣಕ್ಕೆ  ಮತ್ತೆ ಸೀಲ್‌ಡೌನ್‌

01:28 AM May 21, 2021 | Team Udayavani |

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಪ್ರಕರಣಗಳನ್ನು ಹಿಡಿತಕ್ಕೆ ತರಲು ಜಿಲ್ಲಾಡಳಿತ ಇದೀಗ ಮತ್ತೆ ಪಾಸಿಟಿವ್‌ ಪತ್ತೆಯಾದ ಸ್ಥಳವನ್ನು ಸೀಲ್‌ಡೌನ್‌ ಮಾಡಲು ನಿರ್ಧರಿಸಿದೆ.

Advertisement

ಪಾಸಿಟಿವ್‌ ಪ್ರಕರಣ ದಾಖಲಾದರೂ, ಮನೆಯವರು ಮಾರುಕಟ್ಟೆ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡುತ್ತಿರುವುದು ವರದಿಯಾಗುತ್ತಿದೆ. ಇದರಿಂದಾಗಿ  ಕೋವಿಡ್  ವೈರಸ್‌ ಸಮುದಾಯಕ್ಕೆ ಹರಡಲು ಕಾರಣವಾಗುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಹಿಂದೆ ಬಳಸುತ್ತಿದ್ದ ಸೀಲ್‌ಡೌನ್‌ ಸೂತ್ರವನ್ನು ಅಳವಡಿಸಲು ಜಿಲ್ಲಾಡಳಿತ ಮುಂದಾಗಿದೆ.

 ಆಕ್ಸಿ ಮೀಟರ್ವಿತರಣೆ :

ಶಾಸಕ ಕೆ. ರಘುಪತಿ ಭಟ್‌ ಅವರ ಶಾಸಕರ ಅಭಿವೃದ್ಧಿ ನಿಧಿಯಿಂದ 10 ಲ.ರೂ. ವೆಚ್ಚದಲ್ಲಿ 1,000 ಆಕ್ಸಿಪಲ್ಸ್‌ ಮೀಟರ್‌ಗಳನ್ನು 35 ವಾರ್ಡ್‌ ಹಾಗೂ 19 ಗ್ರಾ.ಪಂ.ಗಳಿಗೆ ವಿತರಿಸಲಾಗಿದೆ. ರೋಬೊ ಸಾಫ್ಟ್ ಕಂಪೆನಿಯು ತನ್ನ ಸಿಎಸ್‌ಆರ್‌ ನಿಧಿಯಿಂದ 1,000 ಆಕ್ಸಿಪಲ್ಸ್‌ ಮೀಟರ್‌ಗಳನ್ನು ನೀಡಲಿದೆ. ಇವುಗಳನ್ನು ಕೊರೊನಾ ಲಕ್ಷಣವಿರದ ಹಾಗೂ ಹೋಂ ಐಸೊಲೇಶನ್‌ನಲ್ಲಿರುವ ರೋಗಿಗಳ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಲು ಬಳಸ ಬಹುದಾಗಿದೆ.

ಎಂಐಟಿಯಲ್ಲಿ  ಕೇರ್ಸೆಂಟರ್‌  :

Advertisement

ಕೋವಿಡ್  ಲಕ್ಷಣವಿರದ ಹಾಗೂ ಮನೆಯಲ್ಲಿ ಐಸೊಲೇಶನ್‌ಗೆ ಕಷ್ಟ ವಾದವರಿಗೆ ಅನುಕೂಲವಾಗುವಂತೆ ಮಣಿಪಾಲದ ಎಂಐಟಿಯಲ್ಲಿ ಕೋವಿಡ್‌ ಕೇರ್‌ ಸೆಂಟರ್‌ ಸ್ಥಾಪಿಸಲಾಗಿದೆ. ಸುಮಾರು 300 ಬೆಡ್‌ ಹಾಕಲಾಗಿದ್ದು, ಇಲ್ಲಿ 24 ಗಂಟೆಯೂ ವೈದ್ಯಕೀಯ ಸೇವೆ ಸಿಗಲಿದೆ. ಊಟದ ವ್ಯವಸ್ಥೆಯನ್ನು ನೀಡಲಾಗುತ್ತದೆ. ಇಲ್ಲಿ ಸಿಗುವ ವ್ಯವಸ್ಥೆ ಸಂಪೂರ್ಣವಾಗಿ ಉಚಿತವಾಗಿದೆ. ಸೆಂಟರ್‌ಗೆ ಸೇರಲು ಬಯಸುವ ಕೋವಿಡ್‌ ರೋಗಿಗಳು ಕೋವಿಡ್‌ ಕೇರ್‌ ಕಾಲ್‌ಸೆಂಟರ್‌ ದೂ.ಸಂ. 7204789104 ಕರೆ ಮಾಡಿ ದಾಖಲಾತಿ ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next