Advertisement
ಆಸ್ಪತ್ರೆಯ ಮುಂಭಾಗದಲ್ಲಿ ಪೊಲೀಸರ ಕಾವಲು ಹಾಕಲಾಗಿದೆ. ಆಸ್ಪತ್ರೆಯ ಒಳಗೆ ಹೋಗಲು, ಆಸ್ಪತ್ರೆ ಯಿಂದ ಹೊರ ಬರಲು ಯಾವುದೇ ರೋಗಿಗಳು ಅಥವಾ ಇತರ ಜನ ರಿಗೆ ಅವಕಾಶ ವಿರಲಿಲ್ಲ. ಆಸ್ಪತ್ರೆ ಮುಂಭಾಗದಲ್ಲಿರುವ ಹೆದ್ದಾರಿಯಲ್ಲಿ ತುರ್ತು ವಾಹನಗಳಿಗೆ ಏಕಮುಖ ಸಂಚಾರಕ್ಕಷ್ಟೇ ಅವಕಾಶ ಕಲ್ಪಿಸಲಾಗಿದೆ. ಪುತ್ತೂರು, ಬಂಟ್ವಾಳ ಭಾಗದಿಂದ ಮಂಗಳೂರು ನಗರಕ್ಕೆ ಪ್ರವೇಶ ಪಡೆಯುವ ರಸ್ತೆಗೆ ಆಸ್ಪತ್ರೆ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಮುಚ್ಚಲಾಗಿತ್ತು.
ನಗರ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಲಾಕ್‌ಡೌನ್ ಉಲ್ಲಂ ಘನೆ ಮಾಡಿ ಸಂಚರಿಸುತ್ತಿದ್ದ 88 ವಾಹನ ಗಳನ್ನು ಮಂಗಳೂರು ನಗರ ಪೊಲೀಸರು ಶುಕ್ರವಾ ರ ಮುಟ್ಟು ಗೋಲು ಹಾಕಿದ್ದಾರೆ. ಈ ಪೈಕಿ 77 ದ್ವಿಚಕ್ರ ವಾಹನ, 8 ತ್ರಿಚಕ್ರ ವಾಹನ ಹಾಗೂ 3 ಚತುಷ್ಕಕ್ರ ವಾಹನಗಳಾಗಿರುತ್ತವೆ. ಎ. 23ರಂದು 79 ವಾಹನಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಈ ಪೈಕಿ 54 ದ್ವಿಚಕ್ರ, 6 ತ್ರಿಚಕ್ರ ಹಾಗೂ 19 ಚತುಷ್ಕಕ್ರ ವಾಹನಗಳಾಗಿರುತ್ತವೆ. ಬೆಳ್ತಂಗಡಿ ತಾಲೂಕಿನ ಹಲವರಿಗೆ ಕ್ವಾರಂಟೈನ್
ಬೆಳ್ತಂಗಡಿ: ಫಸ್ಟ್ ನ್ಯೂರೋ ಆಸ್ಪತ್ರೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನರ್ಸ್ ತಾಲೂಕಿನ ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಮೂಡಬೆಟ್ಟು ನಿವಾಸಿ ಮತ್ತು ಅವರ ಮನೆಯ ಸದಸ್ಯರನ್ನು ಹೋಂ ಕ್ವಾರಂಟೈನ್‌ಗೆ ಒಳ ಪಡಿಸಲಾಗಿದೆ. ಮಡಂತ್ಯಾರು ಬಳಿಯ ಕೊಲ್ಪೆದಬೈಲಿನ 76 ವರ್ಷದ ವೃದ್ಧೆಯೊಬ್ಬರು ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದು ಮನೆಗೆ ಮರಳಿರುವುದರಿಂದ ಆ ಕುಟುಂಬವನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ.
ತಾಲೂಕಿನ ನೆರಿಯ ಗ್ರಾ.ಪಂ. ವ್ಯಾಪ್ತಿಯ ಪಾದೆಗುಡ್ಡೆಯ 2 ಕುಟುಂಬವು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದೆ ಹಾಗೂ ಗಂಡಿ ಬಾಗಿಲು, ಕಲ್ಕಾರ್ನ ತಲಾ ಒಂದು ಕುಟುಂಬದಿಂದ ಫಸ್ಟ್ ನ್ಯೂರೋ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ರೋಗಿಯ ಆರೋಗ್ಯ ವಿಚಾರಿಸಲು ಭೇಟಿ ನೀಡಿದ್ದರಿಂದ ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ.
Related Articles
ಫಸ್ಟ್ ನ್ಯೂರೋದಲ್ಲಿ 15 ದಿನಗಳ ಹಿಂದೆ ಚಿಕಿತ್ಸೆ ಪಡೆದಿದ್ದ ಕರಾಯ ಮಹಿಳೆಯೊಬ್ಬರು ಗುರು ವಾರ ಉಜಿರೆ ಖಾಸಗಿ ಆಸ್ಪತ್ರೆಗೆ ತೆರಳಿದ್ದ ರಿಂದ ಅವರನ್ನು ಅಲ್ಲಿಂದ ನೇರ ವಾಗಿ ಮಂಗಳೂರು ವೆವೆನ್ಲಾಕ್‌ಗೆ ಸಾಗಿಸಲಾಗಿದೆ. ಈ ಮಧ್ಯೆ ಶುಕ್ರವಾರ ಉಜಿರೆ ಸಂಬಂಧಪಟ್ಟ ಆಸ್ಪತ್ರೆ ಸೀಲ್‌ಡೌನ್ ಎಂಬ ವದಂತಿ ಆತಂಕಕ್ಕೆ ಕಾರಣ ವಾಗಿತ್ತು. ಮಹಿಳೆಯನ್ನು ಕೋವಿಡ್ ಟೆಸ್ಟ್‌ಗೆ ಒಳಪಡಿಸಿದ್ದು ವರದಿ ಬಳಿಕ ಜಿಲ್ಲಾಡಳಿತ ಮಾಹಿತಿ ನೀಡಲಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
Advertisement