Advertisement
ಉಚ್ಚಿಲ, ಎರ್ಮಾಳು, ಪಡುಬಿದ್ರಿ ಪರಿಸರದಲ್ಲೂ ಸಮುದ್ರದ ನೀರುಹಸಿರು ಬಣ್ಣಕ್ಕೆ ತಿರುಗಿದ್ದು, ದುರ್ವಾಸನೆ ಬರುತ್ತಿದೆ. ಇದು ಮೀನುಗಾರರಲ್ಲಿ ಆತಂಕಕ್ಕೆ ಕಾರಣವಾಗಿದ್ದರೆ, ಪ್ರವಾಸಿಗರಲ್ಲಿ ಕುತೂಹಲ ಮೂಡಿಸಿದೆ. ಸಮುದ್ರದ ನೀರು ಪಾಚಿಗಟ್ಟಿದ ಹಸಿರು ಬಣ್ಣದಂತೆ ಇರುವುದರಿಂದ ಕಡಲ ಕಿನಾರೆಗೆ ಬರುವ ಪ್ರವಾಸಿಗರು ನೀರಿಗಿಳಿಯಲು ಹಿಂದೇಟು ಹಾಕುತ್ತಿದ್ದಾರೆ. ಸಮುದ್ರಕ್ಕೆ ಇಳಿದ ಯಾರಿಗೂ ಬಣ್ಣ ಮೆತ್ತಿಕೊಳ್ಳುತ್ತಿಲ್ಲ.
ಮಳೆಗಾಲದಲ್ಲಿ ಬಂಡೆಯನ್ನು ಅಂಟಿಕೊಳ್ಳುವ ಪಾಚಿ ಬಂಡೆಯಿಂದ ಬೇರ್ಪಟ್ಟು ಸಮುದ್ರಕ್ಕೆ ಬೀಳುವುದರಿಂದ ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಹಿಂದೆಯೂ ಈ ರೀತಿ ನಡೆದಿತ್ತು. ಕಳೆದ ಮೂರ್‍ನಾಲ್ಕು ದಿನಗಳಿಂದ ಸಮುದ್ರ ಹೀಗೆಯೇ ಕಾಣುತ್ತಿದೆ. ಅಥವಾ ಪ್ರಕೃತಿಯ ನಿಯಮದಿಂದಾಗಿಯೂ ನೀರು ಈ ರೀತಿ ಆಗಿರಬಹುದು ಎನ್ನುವುದು ಬೀಚ್ ಸ್ವತ್ಛತಾ ನಿರ್ವಾಹಕ ಪ್ರಶಾಂತ್ ಕರ್ಕೇರರ ಅಭಿಪ್ರಾಯವಾಗಿದೆ. ಮೀನುಗಾರಿಕೆಗೆ ತೊಂದರೆ
ಸಮುದ್ರದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದರಿಂದ ಮೀನುಗಾರಿಕೆಯೂ ಕಷ್ಟವಾಗುತ್ತಿದೆ. ಬಲೆಗಳಲ್ಲಿ ಹಸಿರು ಪಾಚಿ ಸಿಕ್ಕಿ ಹಾಕಿ ಕೊಳ್ಳುತ್ತಿರುವುದರಿಂದ ಮೀನುಗಳು ಬಲೆಗೆ ಬೀಳುತ್ತಿಲ್ಲ. ಮೀನುಗಾರಿಕೆ ಮಾಡಲು ಕಷ್ಟವಾಗುತ್ತಿದೆ. ಇದು ಹೀಗೆಯೇ ಮುಂದುವರಿದರೆ ಇನ್ನೇನು ಎಂಬ ಸ್ಥಿತಿ ಎದುರಾಗಿದೆ ಎಂದು ಮೀನುಗಾರ ರಮೇಶ್ ಕೋಟ್ಯಾನ್ ತಿಳಿಸಿದ್ದಾರೆ.
Related Articles
ನಾನು ಹಲವು ವರ್ಷಗಳಿಂದ ಸಮುದ್ರದ ಬಳಿ ಚರುಮುರಿ ವ್ಯಾಪಾರ ಮಾಡುತ್ತಿದ್ದೇನೆ. ಹೀಗೆ ಸುದೀರ್ಘ ಅವಧಿಯವರೆಗೆ ನೀರು ಹಸಿರು ಬಣ್ಣಕ್ಕೆ ತಿರುಗಿದ್ದನ್ನು ಕಂಡಿರಲಿಲ್ಲ. ಇದು ನೈಸರ್ಗಿಕವೋ ಅಥವಾ ಪ್ರಾಕೃತಿಕ ವೈಪರೀತ್ಯದ ಪರಿಣಾಮವೋ ಎನ್ನುವುದು ತಿಳಿಯುತ್ತಿಲ್ಲ. ವೈಜ್ಞಾನಿಕ ಸಂಶೋಧನೆ ನಡೆದರೆ ಉತ್ತಮ ಎನ್ನುತ್ತಾರೆ ಕೃಷ್ಣ ಅವರು.
Advertisement