ಕುಂದಾಪುರ : ಕೋಡಿ ಕಡಲತೀರದಲ್ಲಿ ರವಿವಾರ ಎಂಟನೇ ಬಾರಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ವಿವಿಧೆಡೆ ಒಟ್ಟು 9 ಬಾರಿ ದೊರೆತಂತಾಗಿದೆ.
ಕೋಡಿ ಲೈಟ್‌ಹೌಸ್ ಸಮೀಪ ಒಂದೇ ಸಾಲಿನಲ್ಲಿ ಸತತವಾಗಿ ಕಡಲಾಮೆ ಮೊಟ್ಟೆಗಳು ಪತ್ತೆಯಾಗುತ್ತಿವೆ. ಇವನ್ನು ಅರಣ್ಯ ಇಲಾಖೆ ಸಹಯೋಗದಲ್ಲಿ ಸಂರಕ್ಷಿಸುವ ಕಾರ್ಯ ನಡೆಯುತ್ತಿದೆ.
ಈ ಬಾರಿ ಕೋಡಿ ಸೀತಾರಾಮ ಮಂದಿರ ಬಳಿ 120ಕ್ಕಿಂತ ಅಧಿಕ ಮೊಟ್ಟೆಗಳು ಭರತ್ ಖಾರ್ವಿ, ಉದಯ ಖಾರ್ವಿ, ಸಚಿನ್ ಖಾರ್ವಿ ಅವರಿಗೆ ಪತ್ತೆಯಾಗಿದ್ದು ರಕ್ಷಿಸಲಾಗಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ, ಎಸಿಎಫ್ ಲೋಹಿತ್, ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಡಿಆರ್‌ಎಫ್ಒ ಉದಯ್, ಕೋಡಿ ಫಾರೆಸ್ಟ್ ಗಾರ್ಡ್ ಹಸ್ತಾ ಶೆಟ್ಟಿ, ಎಫ್ಎಸ್‌ಎಲ್ ಇಂಡಿಯಾದ ದಿನೇಶ್ ಸಾರಂಗ, ವೆಂಕಟೇಶ ಶೇರುಗಾರ್, ಮಂಜುನಾಥ ಕನ್ನಾಲ್, ಕ್ಲೀನ್ ಕುಂದಾಪುರ ಪ್ರಾಜೆಕ್ಟ್‌ನ ಸದಸ್ಯರಾದ ಭರತ್ ಬಂಗೇರ, ಸಂದೀಪ್ ಕೋಡಿ, ಶಶಿಧರ, ಸತ್ಯನಾರಾಯಣ ಮಂಜ, ಅರುಣ್, ಶೀತಲ್, ಸರಸ್ವತಿ ಪೂಜಾರಿ, ಲಕ್ಷ್ಮಣ್ ಪೂಜಾರಿ, ರಾಘವೇಂದ್ರ ಪೂಜಾರಿ, ಸಂಪತ್, ದಿನೇಶ್ ಪೂಜಾರಿ, ರೀಫ್ ವಾಚ್ ತಂಡದ ತೇಜಸ್ವಿನಿ ಇದ್ದರು. ಸತತವಾಗಿ ಈ ಪ್ರದೇಶದಲ್ಲಿ ಮೊಟ್ಟೆ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ಜೀವವೈವಿಧ್ಯ ಮಂಡಳಿಯವರು ಆಗಮಿಸಿ ವೀಕ್ಷಿಸಿದ್ದಾರೆ.
ಬಾರಕೂರು ಕಾಲೇಜಿನ ವಿದ್ಯಾರ್ಥಿಗಳೂ ಆಗಮಿಸಿ ನೋಡಿದ್ದಾರೆ. ಮುಂಬಯಿಯ ತಂಡವೊಂದು ಕೂಡ ವೀಕ್ಷಿಸಿದೆ.