Advertisement
ಈ ಹಿಂದೆ ಮಲ್ಪೆ ಪಡುಕರೆ, ಮಲ್ಪೆ ಬೀಚ್, ಹನುಮಾನ್‌ನಗರ, ತೊಟ್ಟಂ, ಹೂಡೆಯಲ್ಲಿ ಪ್ರತೀ ವರ್ಷ ಸಾಮಾನ್ಯವಾಗಿ ಕಡಲ್ಕೊರೆತ ಕಾಣಿಸಿಕೊಳ್ಳುತ್ತಿತ್ತು. ಮೂಳೂರು, ಮಟ್ಟು , ಉದ್ಯಾವರದ ಪ್ರದೇಶದಲ್ಲಿ ಈ ಹಿಂದೆ ಹೆಚ್ಚು ಕೊರೆತ ಸಂಭವಿಸುತ್ತಿದ್ದು ಇದೀಗ ಕಳೆದ ಕೆಲವು ವರ್ಷದಿಂದ ತುಸು ಕಡಿಮೆಯಾಗಿದೆ.
ಯಲ್ಲಿ 200 ಮೀ. ಅಂತರದಲ್ಲಿ ಸುಮಾರು 20 ಕಡೆ ಗ್ರೆಹನ್ಸ್ ತಡೆಗೋಡೆಯನ್ನು ಮಾಡ
ಲಾಗಿತ್ತು. ಇದೀಗ ಆ ಪ್ರದೇಶದಲ್ಲಿ ಕೊರೆತ ಉಂಟಾಗುವುದು ಕಡಿಮೆ ಎನ್ನಲಾಗಿದೆ. ಕುತ್ಪಾಡಿಯಿಂದ ಮುಂದಕ್ಕೆ ಬಂದರು ಇಲಾಖೆಯ ವತಿಯಿಂದ ತಲಾ 1.25 ಕೋ. ರೂ. ವೆಚ್ಚದಲ್ಲಿ ಸುಮಾರು 5 ಕಡೆ
75 ಮೀಟರ್ ಉದ್ದದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ಈ ಬಾರಿ ಮೂಳೂರು, ಕಾಪು, ಮರವಂತೆಯಲ್ಲಿ ಸಣ್ಣ ಪ್ರಮಾಣದಲ್ಲಿ ಮತ್ತೆ ಕಡಲ ಕೊರೆತ ಕಾಣಿಸಿಕೊಂಡಿದೆ. ಪ್ರಕೃತಿ ವಿಕೋಪದಡಿ ಇಲ್ಲಿ ತಾತ್ಕಾಲಿಕ ಪರಿಹಾರಿ ಕಲ್ಪಿಸುವ ಯೋಜನೆಯೂ ನಡೆಯಲಿದೆ ಎನ್ನಲಾಗಿದೆ.
Related Articles
Advertisement