Advertisement
ಸಮುದ್ರ ಪೂಜೆಯ ಬಳಿಕ ಚಾಲನೆ ಮರವಂತೆಯಲ್ಲಿ ಮಂಗಳವಾರ ಕುಂದಾಪುರ ತಾಲೂಕು ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಶ್ರೀ ವರಾಹ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ನೆರವೇರಿ ಅನಂತರ ಸಮುದ್ರ ಪೂಜೆ ನಡೆಸಲಾಯಿತು. ಬುಧವಾರ ಗಂಗೊಳ್ಳಿಯ ಮಡಿ ತೀರದಲ್ಲಿಯೂ ಕೂಡ ಸಮುದ್ರ ಪೂಜೆಯ ಬಳಿಕ ನಾಡದೋಣಿ ಮೀನುಗಾರಿಕೆಗೆ ಚಾಲನೆ ನೀಡಲಾಯಿತು.
ಸಮುದ್ರದಲ್ಲಿ ತೂಫಾನ್ ಎದ್ದರೆ ಮಾತ್ರ ಮೀನುಗಳು ಹೇರಳವಾಗಿ ಲಭ್ಯ ಆಗುತ್ತವೆ. ಕಳೆದ ಬಾರಿ ನಾಡದೋಣಿ ಮೀನುಗಾರಿಕೆ ಅಷ್ಟೇನೂ ಆಶಾದಾಯಕವಾಗಿರಲಿಲ್ಲ. ಆದರೆ ಈ ಬಾರಿಯಾದರೂ ಉತ್ತಮ ಮೀನುಗಾರಿಕೆಯ ಆಶಾಭಾವನೆಯೊಂದಿಗೆ ನಾಡದೋಣಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಒಟ್ಟಿನಲ್ಲಿ ಉತ್ತಮ ಮೀನು ಬೇಟೆಯ ನಿರೀಕ್ಷೆಯಲ್ಲಿ ಮೀನುಗಾರರು ಕಡಲಿಗೆ ಇಳಿದಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ
ಗಂಗೊಳ್ಳಿಯ ಲೈಟ್‌ಹೌಸ್ ಬಳಿಯ ಮಡಿ ಪರಿಸರದಲ್ಲಿ ಹಾಗೂ ಮರವಂತೆಯ ಹೊರ ಬಂದರು ಪ್ರದೇಶದಲ್ಲಿ ಪ್ರತಿವರ್ಷ ನಡೆಯುತ್ತಿರುವ ಸಾಂಪ್ರದಾಯಿಕ ನಾಡದೋಣಿ ಮೀನುಗಾರಿಕೆಗೆ ಮೀನುಗಾರರು ತೆರಳುವ ದೃಶ್ಯ ಕಂಡು ಬಂತು ಉಡುಪಿಯ ಗಡಿ ಭಾಗವಾದ ಶಿರೂರಿನಿಂದ ಸಾಸ್ತಾನದ ಕೋಡಿಯ ತನಕದ ಸಾವಿರಾರು ಮೀನುಗಾರರು ಮರವಂತೆ ಹಾಗೂ ಗಂಗೊಳ್ಳಿಯ ಮಡಿ ಪ್ರದೇಶದಲ್ಲಿ ನಾಡದೋಣಿ ಮೀನುಗಾರಿಕೆ ನಡೆಸುತ್ತಿದ್ದಾರೆ.
Related Articles
Advertisement