Advertisement

ಕಡಲಾಮೆ ರಕ್ಷಣೆ : ಕಾರ್ಯಾಗಾರ

01:00 AM Feb 12, 2019 | Harsha Rao |

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಡಲಾಮೆ ರಕ್ಷಣೆ ಕುರಿತು ಮಾಹಿತಿ ಕಾರ್ಯಾಗಾರವು ಎನ್ನೆಸ್ಸೆಸ್‌, ರೆಡ್‌ಕ್ರಾಸ್‌ ಹಾಗೂ ರೋವರ್‌-ರೇಂಜರ್‌ ಸಂಘಟನೆಗಳ  ಸಂಯುಕ್ತ ಆಶ್ರಯದಲ್ಲಿ ನಡೆಯಿತು.

Advertisement

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಎಫ್‌.ಎಸ್‌.ಎಲ್‌. ಇಂಡಿಯಾ ಸಂಸ್ಥೆಯ ಯೋಜನಾ ನಿರ್ದೇಶಕ ಮಂಜುನಾಥ, ವೆಂಕಟೇಶ್‌ ಮತ್ತು ಸ್ವಯಂಸೇವಕ ಸಂಶೋಧನಾ ವಿದ್ಯಾರ್ಥಿಗಳಾದ ಎಮಿಲ್‌, ಮಿಲಿನಾ ಹಾಗೂ ವಿಕ್ಟೋರಿಯಾ ವಿದ್ಯಾರ್ಥಿಗಳಿಗೆ, ಕಡಲಾಮೆ ಹುಟ್ಟು, ಬೆಳವಣಿಗೆ, ಸಂತಾನಾಭಿವೃದ್ಧಿ ಹಾಗೂ ಉಪಯೋಗಗಳು, ಆಹಾರ ಪದ್ದತಿ, ಇವು ಗಳ ನಾಶಕ್ಕೆ ಕಾರಣವಾಗಿರುವ ಅಂಶ, ರಕ್ಷಣೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.

ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್‌  ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾ ಧಿಕಾರಿ ನಾಗರಾಜ ವೈದ್ಯ ,ರೋವರ್ಸ್‌ ಲೀಡರ್‌ ಮಂಜುನಾಥ ಆಚಾರಿ ಹಾಗೂ ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ, ಕಚೇರಿ ಸಹಾಯಕ ಸುಜೀಂದ್ರ ಮುಂತಾದವರು ಉಪಸ್ಥಿತರಿದ್ದರು.ಸಂಚಾಲಕ ಪ್ರಶಾಂತ್‌ ನೀಲಾವರ ಪ್ರಾಸ್ತಾವಿಕವಾಗಿ ಮಾತನಾಡಿದರು,  ಎನ್ನೆಸ್ಸೆಸ್‌ ಯೋಜನಾಧಿ ಕಾರಿ  ರಾಜಣ್ಣ ಸ್ವಾಗತಿಸಿ, ಮುರುಳಿ ಎನ್‌. ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next