Advertisement
ಉಡುಪಿ-ತೆಂಕಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ ದೇವಸ್ಥಾನದ ಶ್ರೀ ಭುವನೇಂದ್ರ ಮಂಟಪದಲ್ಲಿ ಸೋಮವಾರ ನಡೆದ ಉಡುಪಿ ನಗರಸಭೆ ವ್ಯಾಪ್ತಿಯ “ತೆಂಕಪೇಟೆ ವಾರ್ಡ್ ಮಟ್ಟದ ಜನಸಂಪರ್ಕ ಸಭೆ’ ಅಧ್ಯಕ್ಷತೆ ವಹಿಸಿದ್ದ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ನಿರಂತರ ನಡೆಯುತ್ತಿರುವ ವಿಶಿಷ್ಟ ಪರಿಕಲ್ಪನೆಯ ಈ “ಜನ ಸಂಪರ್ಕ ಸಭೆ’ ದೇಶದಲ್ಲೇ ವಿನೂತನವಾದ ಕಾರ್ಯಕ್ರಮವಾಗಿ ಮೂಡಿಬರುತ್ತಿರುವುದಲ್ಲದೆ ಎಲ್ಲೆಡೆ ಯಿಂದಲೂ ಪ್ರಶಂಸನೀಯ ನುಡಿ ಕೇಳಿ ಬರುತ್ತಿರು ವುದು ಸಾರ್ಥಕತೆಯನ್ನು ಸೂಚಿಸುತ್ತದೆ. ಜನತೆಗೆ ಪೂರ್ವಭಾವಿಯಾಗಿ ತಿಳಿಸಿ ನಡೆಸಲ್ಪಡುವ ಈ ಸಭೆಯಲ್ಲಿ ಸ್ವತಃ ಜನರಿಂದಲೇ ಅವರ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ತಕ್ಕುದಾದ ಪರಿಹಾರ ನೀಡುವುದು ಅತ್ಯಂತ ಸಂತೋಷ ಕೊಡುತ್ತದೆ ಎಂದರು. ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನರಸಿಂಹಮೂರ್ತಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ, ತೆಂಕಪೇಟೆ ವಾರ್ಡ್ ಸದಸ್ಯ ಶಾಂತಾರಾಮ ಸಾಲ್ವಂಕರ್, ನಗರಸಭೆ ಸದಸ್ಯ ರಾದ ರಮೇಶ್ ಕಾಂಚನ್, ನಾರಾಯಣ ಕುಂದರ್, ಹಸನ್ ಸಾಹೇಬ್, ಚಂದ್ರಕಾಂತ ನಾಯಕ್, ಜನಾರ್ದನ್ ಭಂಡಾರ್ಕರ್, ಗಣೇಶ್ ನೇರ್ಗಿ, ಕೆಎಸ್‌ಆರ್‌ಟಿಸಿ ಡೆಪ್ಯುಟಿ ಕಮೀಷನರ್ ದೀಪಕ್, ಸರ್ಕಲ್ ಇನ್ಸ್‌ಪೆಕ್ಟರ್ ನವೀನ್ ಚಂದ್ರ ಜೋಗಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
Related Articles
Advertisement
ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿ ಸಿಆರ್‌ಝಡ್ ಭಾಗದಲ್ಲಿ ಈಗಾಗಲೇ ಮರಳು ತೆಗೆಯಲು ಚಾಲನೆ ದೊರಕಿದ್ದು, ಇದೀಗ ಸೋಮ ವಾರ ನಡೆದ ರಾಜ್ಯದ ಕ್ಯಾಬಿನೆಟ್ ಸಭೆಯಲ್ಲಿ ನಾನ್ ಸಿಆರ್‌ಝಡ್ ಭಾಗದ ಮರಳುಗಾರಿಕೆಗಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಈ ಮೂರು ಜಿಲ್ಲೆಗಳಿಗೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸಲಾಗಿದೆ. ಈಗ ಕರಾವಳಿಯ ಮೂರು ಜಿಲ್ಲೆಗಳಲ್ಲಿದ್ದ ದೊಡ್ಡ ಸಮಸ್ಯೆಯಾದ ಮರಳು ನೀತಿಗೆ ಸರಕಾರ ಸೂಕ್ತ ಪರಿಹಾರ ಒದಗಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಮೂರು ಜಿಲ್ಲೆಗಳಲ್ಲಿ ತೆಗೆಯಲ್ಪಡುವ ಮರಳು ಬೇರೆ ಜಿಲ್ಲೆಗಳಿಗೆ ಸರಬರಾಜು ಮಾಡಿದರೆ ದರ ಹೆಚ್ಚಳವಾಗುವುದಲ್ಲದೆ ಮರಳು ಅಭಾವ ತಲೆದೋರಲಿದೆ. ಇದಕ್ಕಾಗಿ ಬೇರೆ ಜಿಲ್ಲೆಗಳಿಗೆ ಮರಳು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಅವರು ತಿಳಿಸಿದರು.