Advertisement

ಸೆ.29-ಅ.9: ದಸರಾ ಫ‌ಲಪುಷ್ಪ ಪ್ರದರ್ಶನ

09:03 AM Sep 28, 2019 | sudhir |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ಕುಪ್ಪಣ್ಣ ಉದ್ಯಾನದಲ್ಲಿ ಸೆ.29ರಿಂದ ಅ.9ರ ವರೆಗೆ ಆಯೋಜಿಸಿರುವ “ದಸರಾ ಫ‌ಲಪುಷ್ಪ ಪ್ರದರ್ಶನ’ದಲ್ಲಿ ಮೈಸೂರು ಸಂಸ್ಥಾನದ ಕೊನೆಯ ಮಹಾರಾಜ ಜಯಚಾಮರಾಜ ಒಡೆಯರ್‌ ಅವರ 100ನೇ ಜನ್ಮ ಶತಾಬ್ಧ ಸಂಬಂಧದ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಗಾಜಿನ ಮನೆಯಲ್ಲಿ ಹೂವುಗಳಿಂದಲೇ ಜಯಚಾಮರಾಜ ಒಡೆಯರ್‌ ಪ್ರತಿಮೆ ಮತ್ತು ಗೋಪುರವನ್ನು ನಿರ್ಮಿಸಲಾಗುತ್ತಿದೆ.

Advertisement

ನೆಲಮಟ್ಟದಿಂದ 50 ಅಡಿ ಉದ್ದ, 27 ಅಡಿ ಎತ್ತರವಿರುವ ಮಹಾರಾಜರ ಪ್ರತಿಕೃತಿಯನ್ನು ರಚಿಸಲಾಗುತ್ತಿದ್ದು, 12 ಅಡಿ ವ್ಯಾಸದ ವೃತ್ತ ನಿರ್ಮಿಸಲಾಗುತ್ತಿದೆ. ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ಈ ಮಾದರಿಯನ್ನು ಅಲಂಕರಿಸಲಾಗುವುದು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ರುದ್ರೇಶ್‌ ತಿಳಿಸಿದರು.

ಚಲನಚಿತ್ರ ನಟರಾದ ಸೃಜನ್‌ ಲೋಕೇಶ್‌, ಅಜಯ್‌ ರಾವ್‌, ಆದಿತ್ಯ, ರಾಜ್‌ ವರ್ಧನ್‌, ಬಾಲು ನಾಗೇಂದ್ರ, ಚೇತನ್‌ ಚಂದ್ರ, ನಟಿ ಹರಿಪ್ರಿಯಾ ಮತ್ತು ಕಲರ್ಸ್‌ ಕನ್ನಡ ವಾಹಿನಿಯ ಧಾರಾವಾಹಿ ಕಲಾವಿದರು ಫ‌ಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ. ವಯಸ್ಕರಿಗೆ 30 ರೂ., ಮಕ್ಕಳಿಗೆ 15 ರೂ. ಪ್ರವೇಶ ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು, ಮಕ್ಕಳ ಆಕರ್ಷಣೆಗಾಗಿ 8 ರಿಂದ 9 ಅಡಿ ಎತ್ತರದ ಎರಡು ಡೊನಾಲ್ಡ್‌ ಡಕ್‌ ಪ್ರತಿಕೃತಿ, 15 ಅಡಿ ಎತ್ತರದ ಚಂದ್ರಯಾನ ಪ್ರತಿಕೃತಿ, ಏರ್‌ ಶೋ ಮಾದರಿಯನ್ನು ನಿರ್ಮಿಸಲಾಗುತ್ತಿದೆ ಎಂದವರು ಫ‌ಲಪುಷ್ಪ ಪ್ರದರ್ಶನದ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next