Advertisement

ಎಸ್‌ಡಿಪಿಐ-ಪಿಎಫ್‌ಐ ಕಾಂಗ್ರೆಸ್‌ ಸಾಕಿದ ಕೂಸುಗಳು : ಪ್ರಹ್ಲಾದ ಜೋಷಿ

11:40 PM May 28, 2022 | Team Udayavani |

ಹುಬ್ಬಳ್ಳಿ: ಎಸ್‌ಡಿಪಿಐ ಮತ್ತು ಪಿಎಫ್‌ಐ ಕಾಂಗ್ರೆಸ್‌ ಸಾಕಿದ ಕೂಸುಗಳಾಗಿವೆ. ಈ ಸಂಘಟನೆಗಳವರ ಮೇಲಿದ್ದ ಕೇಸ್‌ಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಅಧಿಕಾರದಲ್ಲಿದ್ದಾಗ ಕೈಬಿಡಲಾಗಿತ್ತು. ಈ ಎರಡು ಸಂಘಟನೆಗಳ ನಿಷೇಧ, ಇನ್ನಿತರ ಕ್ರಮಕ್ಕೆ ಬಿಜೆಪಿ ಸೂಕ್ತ ಚಿಂತನೆ ನಡೆಸಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ತಿಳಿಸಿದರು.

Advertisement

ಶನಿವಾರ ಸುದ್ದಿಗಾರರೊಂ ದಿಗೆ ಮಾತನಾಡಿದ ಅವರು, ಎಸ್‌ಡಿಪಿಐ-ಪಿಎಫ್‌ಐಗಳನ್ನು ಕೇರಳದಲ್ಲಿ ಕಮ್ಯುನಿಸ್ಟ್‌ ಪಕ್ಷ ಹಾಗೂ ಉಳಿದ ರಾಜ್ಯಗಳಲ್ಲಿ ಕಾಂಗ್ರೆಸ್‌ ಪೋಷಿಸುತ್ತಿದೆ. ಮತ ತುಷ್ಟೀಕರಣದ ಪರಮಾವಧಿ ಇದಾಗಿದೆ. ಈಗ ಪಿಎಫ್‌ಐನವರು ಚಿಕ್ಕಮಕ್ಕಳ ಬಾಯಿಂದ ಭಾರತ ವಿರೋಧಿ ಹಾಗೂ ದೇಶದ್ರೋಹಿ ಘೋಷಣೆ ಕೂಗಿಸುವ ಹಂತಕ್ಕೆ ಬಂದಿದ್ದಾರೆ.

ಕೇರಳದಲ್ಲಿ ನಡೆದ ಪಿಎಫ್‌ಐ ಸಮಾವೇಶ ವೇಳೆ ದೇಶ ವಿರೋಧಿ ಘೋಷಣೆ ಹಾಕಿಸಿರುವ ಕುರಿತು ಕೇರಳ ಸರಕಾರ ಗಂಭೀರವಾಗಿ ಪರಿಗಣಿಸಿ ಮುಂದೆ ಹೀಗಾಗದಂತೆ ಕಠಿನ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಎಸ್‌ಡಿಪಿಐ ರಾಜಕೀಯ ಪಕ್ಷವಾ ಗಿದ್ದು, ಅದರ ನಿಷೇಧ ಕುರಿತು ಕಾನೂ ನಾತ್ಮಕ ಸಾಧಕ-ಬಾಧಕಗಳ ಪರಿಶೀಲನೆ ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಎಸ್‌ಡಿಪಿಐನಂತಹ ದೇಶವಿರೋಧಿ ಕಾರ್ಯದ ಪಕ್ಷ-ಸಂಘಟನೆಗಳನ್ನು ಬಿಜೆಪಿ ಸಹಿಸಿಕೊಳ್ಳುವುದಿಲ್ಲ. ಇವುಗಳ ವಿರುದ್ಧ ಕೇಸ್‌ಗಳನ್ನು ಮಾಡುತ್ತಿದ್ದು, ಅಗತ್ಯ ಕ್ರಮಕ್ಕೆ ಹಿಂಜರಿಯುವುದಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next