Advertisement

ಹೊಸಪೇಟೆ ರೈಲು ನಿಲ್ದಾಣಕ್ಕೆ ಶಿಲ್ಪ ಕಲೆ ಟಚ್‌!

09:53 AM Mar 21, 2022 | Team Udayavani |

ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಕುರುಹುಗಳನ್ನು ಒಡಲಿನಲ್ಲಿಟ್ಟುಕೊಂಡ ಐತಿಹಾಸಿಕ ನಗರಿ ಹೊಸಪೇಟೆ ರಾಜ್ಯದ 31ನೇ ಜಿಲ್ಲೆಯಾಗಿ ಹೊರಹೊಮ್ಮಿದ್ದು, ಇಲ್ಲಿನ ರೈಲು ನಿಲ್ದಾಣ ಈಗ ಹಂಪಿ ಶಿಲ್ಪಕಲೆ ಮಾದರಿಯಲ್ಲಿ ರೂಪುಗೊಳ್ಳುತ್ತಿದೆ. ಹಂಪಿ ಶಿಲ್ಪಕಲೆ ಮಾದರಿಯಲ್ಲಿ ಹೊಸಪೇಟೆ ರೈಲ್ವೆ ನಿಲ್ದಾಣ ನವೀಕರಣ ಕಾರ್ಯ ನಡೆಯುತ್ತಿದ್ದು, ವಿಜಯನಗರ ಗತ ವೈಭವವನ್ನು ನೆನಪಿಸುವ ಮೂಲಕ ಮತ್ತೂಂದು ಮೈಲಿಗಲ್ಲಾಗಲಿದೆ. ಹಂಪಿಗೆ ಹೊಂದಿಕೊಂಡಿರುವ ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಹಂಪಿ ಪ್ರಸಿದ್ಧ ಸ್ಮಾರಕಗಳ ಪರಿಕಲ್ಪನೆಯಲ್ಲಿ ನವೀಕರಣ ಮಾಡುವ ಸಂಕಲ್ಪದೊಂದಿಗೆ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಹಾಗೂ ರೈಲ್ವೆ ಇಲಾಖೆ 10 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಿತ್ತು. ರೈಲ್ವೆ ನಿಲ್ದಾಣ ನವೀಕರಣ ಕಾಮಗಾರಿ ಆರಂಭಗೊಂಡಿದ್ದು ಕೊರೊನಾ ಹಿನ್ನೆಲೆಯಲ್ಲಿ ಹಿನ್ನಡೆ ಉಂಟಾಗಿತ್ತು.
ಏಪ್ರಿಲ್‌ನಲ್ಲಿ ಲೋಕಾರ್ಪಣೆ

Advertisement

ನಿಲ್ದಾಣದ ಬಹುತೇಕ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಅಂತಿಮ ಸ್ಪರ್ಶ ನೀಡುವ ಕೆಲಸ ಭರದಿಂದ ಸಾಗಿದೆ. 2021ರ ಮಾರ್ಚ್‌ಲ್ಲಿ ರೈಲು ನಿಲ್ದಾಣ ನವೀಕರಣ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಕೊರೊನಾ ಕಾರಣಕ್ಕೆ ಕಾಮಗಾರಿಗೆ ಹಿನ್ನಡೆಯಾಗಿತ್ತು. ಈಗ ಮತ್ತೆ ಭರದಿಂದ ಕೆಲಸ ನಡೆಯುತ್ತಿದ್ದು ಇದೇ ಏಪ್ರಿಲ್‌ ಅಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ಖಚಿತಪಡಿಸಿವೆ.
ಹೈಟೆಕ್‌ ಸ್ಪರ್ಶ

ಎರಡು ಅಂತಸ್ತುಗಳ ಕಟ್ಟಡದಲ್ಲಿ ನಿರ್ಮಾಣಗೊಂಡಿರುವ ರೈಲು ನಿಲ್ದಾಣಕ್ಕೆ ಹೈಟೆಕ್‌ ಸ್ಪರ್ಶ ನೀಡಲು ರೈಲ್ವೆ ಇಲಾಖೆ ಮುಂದಾಗಿದೆ. ಹಂಪಿ ವಿಜಯವಿಠಲ ದೇವಾಲಯದ ಆವರಣದ ಪ್ರಸಿದ್ಧ ಕಲ್ಲಿನರಥ ವಿನ್ಯಾಸದಲ್ಲಿ ಮೂಡಿಬಂದಿರುವ ಪ್ರವೇಶ ದ್ವಾರ ನೋಡುಗರ ಗಮನ ಸಳೆಯಲಿದೆ. ಇದಕ್ಕಾಗಿ ಆವರಣದಲ್ಲಿ ವಿಶಾಲ ಪ್ರಾಂಗಣ, ವಿಶಾಲವಾದ ಪಾದಚಾರಿ ರಸ್ತೆ, ನಿಲುಗಡೆಯ ಸೂಚಕಗಳ ಒಳಗೊಂಡ ಮಾರ್ಗದರ್ಶಿ ಫಲಕಗಳು, ದೈನಂದಿನ ಟಿಕೆಟ್‌ ಕೌಂಟರ್‌, ಕಾಯ್ದಿರಿಸುವಿಕೆ, ಆಹಾರ ಸಂಕಿರ್ಣ, ವಿಶ್ರಾಂತಿ ಕೊಠಡಿ, ಪ್ರವಾಸಿ ಮಾರ್ಗದರ್ಶನ ಕೇಂದ್ರ, ಹೈಟೆಕ್‌ ಶೌಚಾಲಯ, ಶುದ್ಧ ಕುಡಿಯುವ ನೀರು, ಸೋಲಾರ್‌ ವಿದ್ಯುತ್‌ ಅಳವಡಿಕೆ, ಪ್ಲಾಟ್‌ಫಾರ್ಮ್ಗಳ ಎರಡು ಬದಿಯಲ್ಲಿ ಹಂಪಿ ಸ್ಮಾರಕಗಳ ಉಬ್ಬು ಚಿತ್ರಗಳು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿವೆ.
ಸಹಸ್ರಾರು ಪ್ರವಾಸಿಗರು

ವಿಜಯನಗರ ಸಾಮ್ರಾಜ್ಯದ ಹೆಬ್ಟಾಗಿಲು ಎಂದು ಕರೆಯುವ ಹೊಸಪೇಟೆಯಿಂದ ಸುಮಾರು 12 ಕಿ.ಮೀ. ದೂರದಲ್ಲಿರುವ ಹಂಪಿಗೆ ನಿತ್ಯ ಆಗಮಿಸುವ ಸಹಸ್ರಾರು ಪ್ರವಾಸಿಗರು ಹೆಚ್ಚಾಗಿ ರೈಲಿನ ಮೂಲಕವೇ ಬರಬೇಕಾದ ಹಿನ್ನೆಲೆಯಲ್ಲಿ ನಿಲ್ದಾಣ ಹಂಪಿ ವಾಸ್ತು ಶಿಲ್ಪದ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸುವ ಮೂಲಕ ನವೀಕರಣ ಗೊಳಿಸಲಾಗಿದೆ. ನವೀಕೃತ ರೈಲ್ವೆ ನಿಲ್ದಾಣಕ್ಕೆ ಶ್ರೀಕೃಷ್ಣ ದೇವರಾಯರ ಹೆಸರು ಇಡಬೇಕು ಎಂದು ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ ಆಗ್ರಹಿಸಿದೆ.

ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಹಾಗೂ ರೈಲ್ವೆ ಇಲಾಖೆ 10 ಕೋಟಿ ರೂ. ವೆಚ್ಚದಲ್ಲಿ ಹಂಪಿ ಪ್ರಸಿದ್ಧ ಸ್ಮಾರಕಗಳ ವಿನ್ಯಾಸದಲ್ಲಿ ನವೀಕರಣಗೊಳಿಸಿದೆ. ಏಪ್ರಿಲ್‌ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ

Advertisement

-ಪ್ರಾಣೇಶ್‌ ಕೆ.ಎನ್‌. ಸಾರ್ವಜನಿಕ ಸಂಪರ್ಕಾಧಿಕಾರಿ, ದಕ್ಷಿಣಮಧ್ಯ ನೈರುತ್ಯ ರೈಲ್ವೆ ವಲಯ ಹುಬ್ಬಳ್ಳಿ.

ನವೀಕೃತ ರೈಲ್ವೆ ನಿಲ್ದಾಣಕ್ಕೆ ವಿಜಯನಗರ ಪ್ರಖಾತ ಅರಸ ಶ್ರೀಕೃಷ್ಣ ದೇವರಾಯ ನಾಮಕರಣ ಮಾಡಬೇಕು ಎಂದು ದಕ್ಷಿಣ ನೈರುತ್ಯ ರೈಲ್ವೆ ಹುಬ್ಬಳ್ಳಿ ವಲಯದ ಮಹಾಪ್ರಬಂಧಕರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಸಲ್ಲಿಸಲಾಗಿದೆ – ಅಶೋಕ್‌ ಜೀರೆ, ಅಧ್ಯಕ್ಷರು, ಹುಡಾ ಹಾಗೂ ವಿಕಾಸ ಭಾರತಿ ಸಮಾನ ಮನಸ್ಕರ ವೇದಿಕೆ, ವಿಜಯನಗರ.

ಪಿ.ಸತ್ಯನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next