ರಜಾ ದಿನ ಕಳೆಯಲು ಎರಡು ದಿನಗಳ ಹಿಂದೆ ಥಾಯ್ಲೆಂಡ್‌ಗೆ ತೆರಳಿದ್ದ ಅವರು ಮಂಗಳವಾರ ಸ್ಕೂಬಾ ಡೈವಿಂಗ್ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Advertisement
ಮಂಗಳೂರು ಬೇಕಿಂಗ್ ಕಂಪೆನಿಯ ಮಾಲಕಿಯಾಗಿದ್ದ ಅವರು ನಗರದ ಗೋರಿಗುಡ್ಡ ನಿವಾಸಿಗಳಾದ ದಿ| ಆಸ್ಕರ್ ಮಾರ್ಟಿನ್ ಪಿರೇರಾ ಮತ್ತು ಒಲಿವಿಯಾ ಪಿರೇರಾ ಅವರ ಪುತ್ರಿ. ಅವರ ಕುಟುಂಬ ಹಂಪನಕಟ್ಟೆಯಲ್ಲಿ ಪಿರೇರಾ ರೆಸ್ಟೋರೆಂಟ್ ಹೊಂದಿದೆ. ಸಾವಿನ ಸುದ್ದಿ ತಿಳಿಯುತ್ತಲೇ ಓಶಿನ್ ಪಿರೇರಾ ಅವರ ತಾಯಿ ಮಂಗಳವಾರ ಥಾಯ್ಲೆಂಡ್‌ಗೆ ತೆರಳಿದ್ದಾರೆ. ಅವರು ತಾಯಿ ಮತ್ತು ಸಹೋದರನನ್ನು ಅಗಲಿದ್ದಾರೆ.