Advertisement

ದಲಿತ ಸಂಘಟನೆಗಳಿಂದ ಇಂದು ಭಾರತ್‌ ಬಂದ್‌

07:14 AM Apr 02, 2018 | Team Udayavani |

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಧಿಕಾರಿಯ ಮೇಲೆ ಕೇಸ್‌ ದಾಖಲಿಸಲು ಹಾಗೂ ಬಂಧಿಸಲು ಜಿಲ್ಲಾ ಪೊಲೀಸ್‌ ಸೂಪರಿಂಟೆಂಡೆಂಟ್‌ ಮಟ್ಟದ ಅಧಿಕಾರಿಯ ಅನುಮತಿ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿದ ತೀರ್ಪನ್ನು ವಿರೋಧಿಸಿ ದಲಿತ ಸಂಘಟನೆ ಸಂವಿಧಾನ ಬಚಾವೋ ಸಂಘರ್ಷ ಸಮಿತಿ ಸೋಮವಾರ ಭಾರತ ಬಂದ್‌ಗೆ ಕರೆ ನೀಡಿದೆ.

Advertisement

ಪಂಜಾಬ್‌ನಲ್ಲಿ ಬಂದ್‌ ಪ್ರಭಾವ ಹೆಚ್ಚುವ ಸಾಧ್ಯತೆಯಿದ್ದು, ರಾಜ್ಯ ಸರಕಾರವು ಸಾರ್ವಜನಿಕ ಸಾರಿಗೆ, ಇಂಟರ್‌ನೆಟ್‌ ಹಾಗೂ ಇತರ ಸೇವೆಗಳನ್ನು ಸ್ಥಗಿತಗೊಳಿಸಿದೆ. ಈ ಮಧ್ಯೆ ಸಾಮಾಜಿಕ ನ್ಯಾಯ ಮತ್ತು ಕಲ್ಯಾಣ ಸಚಿವ ತಾವರ್‌ ಚಂದ್‌ ಗೆಹೊÉàಟ್‌ ಟ್ವೀಟ್‌ ಮಾಡಿದ್ದು, ದಲಿತರ ಕಲ್ಯಾಣಕ್ಕೆ ಸರಕಾರ ಬದ್ಧವಾಗಿದೆ.  ಸುಪ್ರೀಂ ಕೋರ್ಟ್‌ಗೆ ಮರುಪರಿ ಶೀಲನೆ ಅರ್ಜಿಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ 4 ಸಾವಿರ ಹೆಚ್ಚುವರಿ ಪೊಲೀಸ್‌ ಸಿಬಂದಿಯನ್ನು ನೇಮಿಸಿದ್ದು, ಹಿಂಸಾಕೃತ್ಯಕ್ಕೆ ಅವಕಾಶ ಕೊಡದಂತೆ ಭದ್ರತೆ ಒದಗಿಸಲು ನಿರ್ಧರಿಸಿದೆ. ಹಿಂಸೆಯಲ್ಲಿ ತೊಡಗುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುತ್ತದೆಂದು ಸರಕಾರ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next