Advertisement

IPC, RPC ಬದಲಾವಣೆ ಮಸೂದೆಗಳ ಪರಿಶೀಲನೆ ಶುರು

08:56 PM Aug 24, 2023 | Team Udayavani |

ನವದೆಹಲಿ: ಭಾರತೀಯ ದಂಡಸಂಹಿತೆ (ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆ (ಎವಿಡೆನ್ಸ್‌ ಆ್ಯಕ್ಟ್) ಯನ್ನು ಬದಲಿಸಲು ಕೇಂದ್ರಸರ್ಕಾರ ಮಂಡಿಸಿರುವ ಮೂರು ಮಸೂದೆಗಳ ಪರಿಶೀಲನೆಯನ್ನು ಗುರುವಾರ ಸಂಸದೀಯ ಸ್ಥಾಯಿ ಸಮಿತಿ ಕೈಗೆತ್ತಿಕೊಂಡಿದೆ.

Advertisement

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಭಲ್ಲಾ ಅವರು ಮಸೂದೆಗಳಲ್ಲಿ ಪ್ರಸ್ತಾಪಿಸಿರುವ ವಿವಿಧ ಅಂಶಗಳ ಬಗ್ಗೆ ವಿವರವಾದ ಪ್ರಸ್ತುತಿಯನ್ನು ಸಮಿತಿಯ ಮುಂದಿಟ್ಟಿದ್ದಾರೆ. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಕೇಂದ್ರಗೃಹ ಸಚಿವ ಅಮಿತ್‌ ಶಾ ಅವರು ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಹಾಗೂ ಭಾರತೀಯ ಸಾಕ್ಷ್ಯ ಮಸೂದೆಗಳನ್ನು ಮಂಡಿಸಿದ್ದರು. ಬಳಿಕ ಸದನವು ಮಸೂದೆಗಳನ್ನು ಸ್ಥಾಯಿ ಸಮಿತಿಗೆ ಉಲ್ಲೇಖೀಸಿತ್ತು. ಇದೀಗ ಅವುಗಳ ಪರಿಶೀಲನೆ ಆರಂಭಗೊಂಡಿದ್ದು, ಶುಕ್ರವಾರ ಮತ್ತು ಶನಿವಾರವೂ ಅಜಯ್‌ ಅವರು ಪ್ರಸ್ತುತಿ ಸಲ್ಲಿಕೆ ಮಾಡಲಿದ್ದಾರೆ. ಆ ಬಳಿಕ ಸಮಿತಿ ಈ ಕುರಿತು ವರದಿ ತಯಾರಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next