Advertisement

Sirsi; ದೇವಸ್ಥಾನದ ಶಿವಲಿಂಗದ ಮೇಲೆ ಗೀಚಿ ವಿಕೃತಿ ಮೆರೆದ ಕಿಡಿಗೇಡಿಗಳು: ಆಕ್ರೋಶ

03:10 PM Feb 04, 2024 | Team Udayavani |

ಶಿರಸಿ: ತಾಲೂಕಿನ ನರೆಬೈಲಿನಲ್ಲಿರುವ ಶ್ರೀ ಸೋಮೇಶ್ವರ ದೇವಸ್ಥಾನದ ಶಿವಲಿಂಗ ಮೂರ್ತಿಗೆ ಕಿಡಿಗೇಡಿಗಳು ಚಾಕ್ ಪೀಸ್ ನಲ್ಲಿ ಬರೆದು ಅಪಮಾನ ಮಾಡಿರುವ ಘಟನೆ ನಡೆದಿದೆ.

Advertisement

ದೇವಾಲಯದಲ್ಲಿರುವ ಶಿವಲಿಂಗದ ಮೇಲೆ ಚಾಕ್ ಪೀಸ್ ನಿಂದ ಇಂಗ್ಲೀಷ್ ಅಕ್ಷರದಿಂದ ಬರೆದು ಅಶುದ್ಧತೆ ಮಾಡಿದ್ದಾರೆ. ಭಾನುವಾರ ಬೆಳಿಗ್ಗೆ 9:15ರ ವೇಳೆಗೆ ಪೂಜೆಗೆ ಬಂದ ಪುರೋಹಿತರಿಂದ ಈ ಘಟನೆ ಬೆಳಕಿಗೆ ಬಂದಿದೆ.

ಗರ್ಭಗುಡಿಯ ಬಾಗಿಲು ದೂಡಿ ಚಾಕ್ ಪೀಸ್ ನಿಂದ ಜೆಇಇ 2024, ಜೆಇಇ2026 ಅಂತ ಬರೆದದ್ದು ಗಮನಕೆ ಬಂದಿದೆ. ಸ್ಥಳಕ್ಕೆ ಶಿರಸಿ ಗ್ರಾಮೀಣ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಯನ್ನು ಖಂಡಿಸಿ ದೇವಸ್ಥಾನದ ಮುಂದೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next