ಯಾದಗಿರಿ: ಸ್ಕೌಟ್ಸ್ ಮತ್ತು ಗೈಡ್ಸ್ ಶಿಸ್ತು ಬದ್ಧಸ್ಥೆಯಾಗಿದ್ದು, ಮಕ್ಕಳಲ್ಲಿ ದೇಶಪ್ರೇಮ, ನಾಯಕತ್ವ ಗುಣ, ಶಿಸ್ತು ಮತ್ತು ಮಾನವೀಯ ಮೌಲ್ಯ ಬೆಳೆಸುತ್ತದೆ ಎಂದು ಸರಕಾರಿ ನೌಕರರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಸಿದ್ರಾಮಪ್ಪ ದುಪ್ಪಲ್ಲಿ ಹೇಳಿದರು.
ನಗರದ ಸ್ಟೇಷನ್ ಬಜಾರ ಪ್ರೌಢಶಾಲೆಯಲ್ಲಿ ಸ್ಕೌಟ್ಸ್ ಸಂಸ್ಥಾಪಕ ಲಾರ್ಡ್ ಬೇಡನ್ ಪೋವೆಲ್ ಅವರ ಜನ್ಮದಿನ ಅಂಗವಾಗಿ ಆಚರಿಸಲಾಗುವ ಚಿಂತನೆ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಮಕ್ಕಳಲ್ಲಿ ಶಿಸ್ತು ಸಂಯಮ ಎಲ್ಲವನ್ನು ಕಲಿಸಿಕೊಡಬೇಕೆಂದಿದ್ದರೆ, ಮಕ್ಕಳಿಗೆ ಸ್ಕೌಟ್ಸ್ ನಂತಹ ಇನ್ನಷ್ಟು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಸ್ಕೌಟ್ಸ್ ಜಿಲ್ಲಾ ಸಂಘಟನಾ ಆಯುಕ್ತ ಮಸಲಿಂಗಪ್ಪ ನಾಯಕ ಹುಲಕಲ್, ಚಿಂತನ ದಿನದ ಮಹತ್ವ ಕುರಿತು ಮಕ್ಕಳಿಗೆ ವಿವರವಾಗಿ ತಿಳಿಸಿಕೊಟ್ಟರು. ಸ್ಕೌಟ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಿ.ಎಂ. ಹೊಸಮನಿ ಜಿಲ್ಲಾ ಗೈಡ್ಸ್ ಆಯುಕ್ತೆ ನಾಗರತ್ನಾ ಮೂರ್ತಿ ಅನಪುರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆ ಮೇಲೆ ಜಿಲ್ಲಾ ಉಪಾಧ್ಯಕ್ಷ ಅನಿಲ್ ಕುಮಾರ, ಪ್ರಭಾರಿ ಮುಖ್ಯಗುರು ವಿವೇಕಾನಂದ, ಉರ್ದು ಮುಖ್ಯ ಗುರು ಮುಷ್ತಾಕ್ ಅಹ್ಮದ್, ರಾಜ್ಯ ಪ್ರತಿನಿಧಿ ಸಂಗೀತಾ ಹಪ್ಪಳ, ಬಸವರಾಜ ಇದ್ದರು.
ಮಹಾತ್ಮಾ ಗಾಂಧಿ, ಡಾನ್ ಬಾಸ್ಕೊ ಸೇರಿದಂತೆ ವಿವಿಧ ಶಾಲೆಯ 100 ಸ್ಕೌಟ್ಸ್ ಮತ್ತು ಗೈಡ್ಸ್ ಮಕ್ಕಳು ಭಾಗವಹಿಸಿದ್ದರು. ಸ್ಕೌಟ್ಸ್ ಗೈಡ್ಸ್ ಮಕ್ಕಳು ಸಾಮೂಹಿಕ ಪ್ರಾರ್ಥನೆ ಗೈದರು. ಜಹೀರ್ ಹುಸೇನ್ ಸ್ವಾಗತಿಸಿದರು. ತಾಲೂಕು ಸ್ಕೌಟ್ಸ್ ಅಧ್ಯಕ್ಷ ಬಸರೆಡ್ಡಿ ನಿರೂಪಿಸಿದರು. ಸ್ಕೌಟ್ಸ್ ಮಾಸ್ಟರ್ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ವಂದಿಸಿದರು.