ಆಲೂರು: ಶಿಸ್ತು, ಸಂಯಮ, ಸೇವಾ ಮನೋಧೋರಣೆ ಮುಂತಾದ ಉದಾತ್ತ ಮಾನವೀಯ ಗುಣಗಳನ್ನು ಸ್ಕೌಟ್ಸ್, ಗೈಡ್ಸ್ ಮಕ್ಕಳಿಗೆ ಚಿಕ್ಕವಯಸ್ಸಿ ನಿಂದಲೇ ಬೆಳೆಸುತ್ತದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ರಾದ ಗುಲಾಂ ಸತ್ತಾರ್ ತಿಳಿಸಿದರು.
ತಾಲೂಕಿನ ಪಾಳ್ಯ ಹೋಬಳಿ ತಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಹಮ್ಮಿ ಕೊಂಡಿರುವ ಬೇಸಿಗೆ ಶಿಬಿರ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.
ಶಿಕ್ಷಕ ಕೊಟ್ರೇಶ್ ಎಸ್.ಉಪ್ಪಾರ್ ಅವರು ತಾಲೂಕು ಭಾರತ್ ಸ್ಕೌಟ್ಸ್ ಗೈಡ್ಸ್ ಸಂಸ್ಥೆಯ ಮುಖ್ಯಸ್ಥರಾದ ಮೇಲೆ ತಾಲೂಕಿನಲ್ಲಿ ಸ್ಕೌಟ್ಸ್, ಗೈಡ್ಸ್ ಸಕ್ರಿಯ ವಾಗಿ ಕಾರ್ಯನಿರ್ವಹಿಸುತ್ತಿದೆ. ತಾಲೂಕಿನ ಪ್ರತಿ ಶಾಲೆಯಲ್ಲಿಯೂ ಸ್ಕೌಟ್ಸ್ , ಗೈಡ್ಸ್ ಶಾಖೆ ಆರಂಭಿಸುವುದು ಅಗತ್ಯ ಎಂದರು. ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ವಿವಿಧ ಆಲೋಚನೆಗಳನ್ನು ಬೆಳಸುವು ದರ ಜೊತೆಗೆ ಮಕ್ಕಳು ಸಾಮಾಜಿಕವಾಗಿ ತೊಡಗುವಂತೆ ಮಾಡುತ್ತವೆ ಎಂದರು.
ಮಕ್ಕಳು ಭವಿಷ್ಯದ ಪ್ರಜೆಗಳು: ಆಲೂರು ಪಟ್ಟಣದ ಸಂತ ಬಿಲಿವಿಯರ್ ಚರ್ಚ್‌ನ ಫಾದರ್ ಬಸವರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಇಂದಿನ ಮಕ್ಕಳೇ ಭವಿಷ್ಯ ಭಾರತದ ಸತøಜೆಗಳು. ಆದ್ದರಿಂದ ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಕಲಿತ ಕಲಿಕಾಂಶಗಳು ಜೀವನದುದ್ದಕ್ಕೂ ಪ್ರಭಾವ ಬೀರುತ್ತವೆ. ಆದ್ದರಿಂದ ಶಿಕ್ಷಕರು ಹೇಳಿಕೊಟ್ಟ ಕಲಿಕಾಂಶಗಳನ್ನು ಮಕ್ಕಳು ಶ್ರದ್ಧೆಯಿಂದ ಕಲಿತು ಪೋಷಕರಿಗೆ ಹಾಗೂ ಶಾಲೆಗೆ ಮತ್ತು ಊರಿಗೆ ಕೀರ್ತಿ ತರುವಂತಹ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಕೊಟ್ರೇಶ್ ಎಸ್.ಉಪ್ಪಾರ್, ಹಳೇ ವಿದ್ಯಾರ್ಥಿಗಳ ಸಂಘದ ಟಿ.ಎಂ. ಮಹೇಶ್, ಟಿ.ಜಿ. ಚಂದ್ರು ಇದ್ದರು.