Advertisement
ಜಾಂಬೂರಿಯಲ್ಲಿ ಭಾಗವಹಿಸುವ ಎಲ್ಲ ಸ್ಕೌಟ್ – ಗೈಡ್ ವಿದ್ಯಾರ್ಥಿಗಳು, ಪೋಷಕರಿಗೆ ಒಟ್ಟು 12 ವಿಭಾಗಗಳಲ್ಲಿ ವಿಜ್ಞಾನ ಲೋಕವನ್ನು ಪರಿಚಯಿಸುವ, ವೈಜ್ಞಾನಿಕ ಚಿಂತನೆಯನ್ನು ಬೆಳೆಸುವ ಕಾರ್ಯ ನಡೆಯಲಿದೆ. ದಿನಕ್ಕೆ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅದಕ್ಕಿಂತ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲರಿಗೂ ಊಟೋಪಚಾರವೂ ಇರಲಿದೆ.
– ವಿಜ್ಞಾನ ಮೇಳದಲ್ಲಿ ಇಸ್ರೋ, ಐಐಎಸ್ಸಿ, ಸಿತಾರ್ ಇತ್ಯಾದಿ ಕಡೆಗಳಿಂದ ವಿಜ್ಞಾನಿಗಳು ಆಗಮಿಸಲಿದ್ದಾರೆ. ಅವರ ವೈಜ್ಞಾನಿಕ ಉಪಕರಣಗಳನ್ನು ಪ್ರದರ್ಶಿಸಲಾಗುವುದು.
– ಸ್ಪರ್ಧಾ ವಿಭಾಗದಲ್ಲಿ ವಿದ್ಯಾರ್ಥಿಗ ಳಿಗೆ ಆಕರ್ಷಕ ಬಹುಮಾನಗಳ ಜತೆಗೆ ಭಾಗವಹಿಸಿದ ಪ್ರತಿಯೊಬ್ಬರಿಗೂ ಪ್ರಮಾಣಪತ್ರ ನೀಡಲಾಗುತ್ತದೆ.
– ವಿಜ್ಞಾನಿಗಳ ಜತೆಗೆ ಸಂವಾದ
– ಆಳ್ವಾಸ್ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಿಂದ ಹಾಗೂ ವಿವಿಧ ಎಂಜಿನಿಯರಿಂಗ್ ಕಾಲೇಜುಗಳ ವತಿಯಿಂದ ವಸ್ತು ಪ್ರದರ್ಶನ ನಡೆಯಲಿದೆ.
– ವಿವಿಧ ರಾಜ್ಯಗಳ ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಆಟಿಕೆಗಳ ಪ್ರದ ರ್ಶನ ಮತ್ತು ಮಾರಾಟ ಇರಲಿದೆ.
– ಮತ್ಸéಗಳು, ಟೆಲಿಸ್ಕೋಪ್, ವಿಮಾನ ಪ್ರದರ್ಶನ ಸಂಯೋಜಿಸಲಾಗಿದೆ. ಹ್ಯಾಮ್ ರೇಡಿಯೋ , ನೇಚರ್ ಕ್ಲಬ್, ಬರ್ಡ್ ಕ್ಲಬ್‌ಗಳೂ ಪಾಲ್ಗೊಳ್ಳಲಿವೆ.
– ಅಗಸ್ತ್ಯ ಫೌಂಡೇಶನ್ ಸಂಸ್ಥೆ ಹಾಗೂ ನಿರ್ಮಿತಿ ಕೇಂದ್ರಗಳಿಂದ ಮಾದರಿಗಳ ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆ, ಭಾರತದ ಭೂವೈಜ್ಞಾನಿಕ ಸಮೀಕ್ಷೆ ವತಿಯಿಂದ ವಿವಿಧ ರೀತಿಯ ಕಲ್ಲುಗಳ ಪ್ರದರ್ಶನ ಮತ್ತು ಮಾಹಿತಿ ಇರಲಿದೆ.