Advertisement

ಅಂಕೋಲಾ: ಹಾರವಾಡಾ ಘಾಟಿನಲ್ಲಿ ಬೆಂಕಿಗಾಹುತಿಯಾದ ಸ್ಕಾರ್ಪಿಯೊ ವಾಹನ

12:27 AM Apr 10, 2023 | Team Udayavani |

ಅಂಕೋಲಾ : ಸ್ಕಾರ್ಪಿಯೊ ಕಾರೊಂದು ಹೊತ್ತಿ ಉರಿದು ಬೆಂಕಿಗಾಹುತಿಯಾದ ಘಟನೆ ತಾಲೂಕಿನ ಹಾರವಾಡದ ಘಾಟಿಯಲ್ಲಿ ನಡೆದಿದೆ.

Advertisement

ಈ ಘಟನೆ ನಡೆದ ವೇಳೆ ಕಾರಿನಲ್ಲಿದ್ದ ಚಾಲಕನೂ ಗಾಯಗೊಂಡಿದ್ದು ಈತನನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ.

ಘಟನೆ ನಡೆದ ಸುದ್ದಿ ತಿಳಿಯುತ್ತಲೇ ಅಗ್ನಿಶಾಮಕದವರು ಸರಿಯಾದ ಸಮಯಕ್ಕೆ ಬಂದು ಬೆಂಕಿ ಆರಿಸಿದರು ಸ್ಕಾರ್ಪಿಯೊ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ. ಗೋವಾ ನೊಂದಣಿ ಹೊಂದಿರುವ GA 05 F 0716 ವಾಹನ ಎಂದು ತಿಳಿದು ಬಂದಿದೆ. ಘಟನೆಗೆ ನಿಖರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಈ ಕುರಿತು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

ಇದನ್ನೂ ಓದಿ: Kanniyakumari : ಛತ್ರಪತಿ ಶಿವಾಜಿ ಪ್ರತಿಮೆಯನ್ನು ಧ್ವಂಸಗೊಳಿಸಿದ ದುಷ್ಕರ್ಮಿಗಳು

Advertisement
Advertisement

Udayavani is now on Telegram. Click here to join our channel and stay updated with the latest news.

Next