Advertisement
ಖಾಸಗಿ ಶಾಲೆಗಳ ಶುಲ್ಕ ನಿಗದಿ ಮತ್ತು ಸಂಗ್ರಹಕ್ಕೆ ಸಂಬಂಧಿಸಿ 2021ರ ಮೇ 3ರಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಆಧರಿಸಿ ಹೈಕೋರ್ಟ್ ಗುರುವಾರ ಈ ಆದೇಶ ನೀಡಿದೆ.
Related Articles
Advertisement
ಸರಕಾರದ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಿರುವ ಹೈಕೋರ್ಟ್, 2019-20ನೇ ಸಾಲಿನಲ್ಲಿ ಸಂಗ್ರಹಿಸಲಾದ ಶುಲ್ಕ ಮೊತ್ತದಲ್ಲಿ ಶೇ. 15ರಷ್ಟು ವಿನಾಯಿತಿ ನೀಡಿ, 2020-21ನೇ ಸಾಲಿಗೆ ಶುಲ್ಕವನ್ನು ಸಂಗ್ರಹಿಸಲು ಅವಕಾಶ ಕಲ್ಪಿಸಿದೆ. ಕೋವಿಡ್ ಪರಿಸ್ಥಿತಿ, ವಿಪತ್ತು ನಿರ್ವಹಣ ಕಾಯ್ದೆ ಆಧರಿಸಿ ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿಪಡಿಸುವ ಅಧಿಕಾರ ರಾಜ್ಯ ಸರಕಾರಕ್ಕೆ ಇಲ್ಲ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಸುಪ್ರೀಂ ತೀರ್ಪು ಆಧರಿಸಿ ಕ್ರಮ:
ಜೋಧಪುರದ ಇಂಡಿಯನ್ ಸ್ಕೂಲ್ ವರ್ಸಸ್ ರಾಜಸ್ಥಾನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ 2020-21ನೇ ಸಾಲಿನಲ್ಲಿ ಶೇ. 15ರಷ್ಟು ರಿಯಾಯಿತಿ ನೀಡಿ ಉಳಿದ ಶುಲ್ಕವನ್ನು ಸಂಗ್ರಹಿಸಲು ಖಾಸಗಿ ಶಾಲೆಗಳಿಗೆ ಅವಕಾಶ ನೀಡಿ ಆದೇಶಿಸಿತ್ತು. ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ಶಾಲೆಗಳು ಮಕ್ಕಳನ್ನು ತರಗತಿಗಳಿಂದ ನಿರ್ಬಂಧಿಸಬಾರದು ಎಂದೂ ತಾಕೀತು ಮಾಡಿತ್ತು. ಇದೇ ತೀರ್ಪು ಆಧರಿಸಿ ಹೈಕೋರ್ಟ್ ಕೂಡ ಆದೇಶ ನೀಡಿದೆ. ಅಲ್ಲದೆ ಶುಲ್ಕ ಪಾವತಿಸಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತೊಂದರೆ ಕೊಡಬಾರದು ಎಂದು ಸುಪ್ರೀಂ ಕೋರ್ಟ್ ವಿಧಿಸಿರುವ ಷರತ್ತುಗಳನ್ನು ತನ್ನ ಆದೇಶದಲ್ಲಿ ಉಲ್ಲೇಖೀಸಿದೆ.
ಸರಕಾರದ ವಾದ :
- ಕೋವಿಡ್ ಸಂಕಷ್ಟದ ಸಮಯದಲ್ಲೂ ಖಾಸಗಿ ಶಾಲೆಗಳು ಸಂಪೂರ್ಣ ಶುಲ್ಕ ಕೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ.
- ಹೈಕೋರ್ಟ್ ಮಧ್ಯಾಂತರ ಆದೇಶ ಇರುವುದರಿಂದ ಶಾಲೆಗಳ ವಿರುದ್ಧ ಬಲವಂತದ ಕ್ರಮ ಕೈಗೊಂಡಿಲ್ಲ.
- ಆದರೆ ಖಾಸಗಿ ಶಾಲೆಗಳು ಹೈಕೋರ್ಟ್ ಆದೇಶ ಪಾಲಿಸುತ್ತಿಲ್ಲ.
- ಹೆತ್ತವರು ಸಂಕಷ್ಟದಲ್ಲಿದ್ದರೂ ಖಾಸಗಿ ಶಾಲೆಗಳು ಅವರ ಅಹವಾಲು ಪರಿಶೀಲಿಸಿ ರಿಯಾಯಿತಿ ನೀಡುತ್ತಿಲ್ಲ.
- ವಿಡ್ ಇದ್ದಾಗಲೂ ಆನ್‌ಲೈನ್ ತರಗತಿ ನಡೆಸಲಾಗಿದೆ. ಶಿಕ್ಷಕರು, ಸಿಬಂದಿಗೆ ವೇತನ ಪಾವತಿಸಲಾಗಿದೆ.
- ಶಾಲೆಗಳು ತೀರಾ ಸಂಕಷ್ಟದಲ್ಲಿವೆ. ರಾಜಸ್ಥಾನದಲ್ಲಿ ಶುಲ್ಕ ನಿಗದಿ ಆದೇಶ ವನ್ನು ಹೈಕೋರ್ಟ್ ರದ್ದುಪಡಿಸಿದೆ.
- ಖಾಸಗಿ ಶಾಲೆಗಳ ಶುಲ್ಕ ನಿಗದಿ ಮಾಡುವ ಅಧಿಕಾರ ಸರಕಾರಕ್ಕೆ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
- ಹಲವು ಹೆತ್ತವರು ಶುಲ್ಕ ಭರಿಸುವ ಸ್ಥಿತಿಯಲ್ಲಿದ್ದಾರೆ. ಸರಕಾರ ಈ ವಿಚಾರ ದಲ್ಲಿ ಮಧ್ಯಪ್ರವೇಶ ಮಾಡಬಾರದು.