Advertisement

ಮಣಿಪಾಲ್‌ ಸ್ಕೂಬಾ ಸ್ಕೂಲ್‌, ಮರೇನಾ ಬೌಲ್ಡರ್‌ ಉದ್ಘಾಟನೆ

12:48 AM Apr 28, 2023 | Team Udayavani |

ಮಣಿಪಾಲ: ಇಲ್ಲಿನ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯು ಸೆಂಟರ್‌ ಫಾರ್‌ ವೈಲ್ಡರ್ನೆಸ್‌ ಮೆಡಿಸಿನ್‌ ಸಹಯೋಗದೊಂದಿಗೆ ದೇಶದ ವಿಶ್ವವಿದ್ಯಾನಿಲಯಗಳಲ್ಲಿ ಮೊಟ್ಟ ಮೊದಲ ಮಣಿಪಾಲ್‌ ಸ್ಕೂಬಾ ಸ್ಕೂಲ್‌ ಮತ್ತು ಕ್ರೀಡಾ ಕ್ಲೆ çಂಬಿಂಗ್‌ ವಾಲ…-ಮರೇನಾ ಬೌಲ್ಡರ್‌ ಉದ್ಘಾಟನೆ ನಡೆಯಿತು.

Advertisement

ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್‌.ಎಸ್‌. ಬÇÉಾಳ್‌ ಅವರು ಉದ್ಘಾಟಿಸಿ ಮಾತನಾಡಿ, ವೈದ್ಯಕೀಯ ವೃತ್ತಿಪರರು ಮತ್ತು ವಿದ್ಯಾರ್ಥಿಗಳಿಗೆ ಸ್ಕೂಬಾ ಡೈವಿಂಗ್‌ ಮತ್ತು ಬೌಲ್ಡರಿಂಗ್‌ ಕಲಿಯಲು ಅವಕಾಶ ನೀಡುತ್ತದೆ. ಜತೆಗೆ ತುರ್ತು ಪ್ರತಿಕ್ರಿಯೆ ನೀಡುವವರಿಗೆ ಅರಣ್ಯ ಔಷಧದ ಅಗತ್ಯ ಕೌಶಲಗಳ ಬಗ್ಗೆ ಕಲಿಯಲು ಮತ್ತು ಈ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಅವಕಾಶ ಕಲ್ಪಿಸಲಿದೆ ಎಂದರು.

ಕುಲಪತಿ ಡಾ| ಲೆ|ಜ| ಎಂ.ಡಿ. ವೆಂಕಟೇಶ್‌ ಅವರು, ಸೆಂಟರ್‌ ಫಾರ್‌ ವೈಲ್ಡರ್ನೆಸ್‌ ಮೆಡಿಸಿನ್‌ ಈ ಕ್ಷೇತ್ರದ ತರಬೇತಿ ಮತ್ತು ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರಲಿದೆ. ಮಾಹೆಯಲ್ಲಿ ಮಣಿಪಾಲ್‌ ಸ್ಕೂಬಾ ಸ್ಕೂಲ್‌ ಮತ್ತು ಮರೇನಾ ಬೌಲ್ಡರ್‌ ತೆರೆಯುವುದರೊಂದಿಗೆ ಈ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆಗೆ ಅನುಕೂಲವಾಗಲಿದೆ ಎಂದರು.

ಸಹಕುಲಪತಿ ಡಾ| ಶರತ್‌ ರಾವ್‌ ಮಾತನಾಡಿ, ಸೆಂಟರ್‌ ಫಾರ್‌ ವೈಲ್ಡರ್ನೆಸ್‌ ಮೆಡಿಸಿನ್‌, ಈ ಉಪಕ್ರಮವನ್ನು ಕಸ್ತೂರ್ಬಾ ಆಸ್ಪತ್ರೆ ಮತ್ತು ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಪಾಲುದಾರಿಕೆ ಹೊಂದಲು ನಾವು ಹೆಮ್ಮೆಯಾಗುತ್ತಿದೆ ಎಂದರು.

ಎಂಸಿಪಿಎಚ್‌ ಡೀನ್‌ ಡಾ| ಅರುಣ್‌ ಮಯ್ಯ, ಕೆಎಂಸಿ ಮಣಿಪಾಲದ ಸಹ ಡೀನ್‌ ಡಾ| ಅನಿಲ್‌ ಭಟ್‌, ಮಾಹೆ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ| ಆನಂದ್‌ ವೇಣುಗೋಪಾಲ…, ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್‌ ಶೆಟ್ಟಿ ಉಪಸ್ಥಿತರಿದ್ದರು.

Advertisement

ತುರ್ತು ಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ| ಫ್ರೆಸ್ಟನ್‌ ಮಾರ್ಕ್‌ ಸಿರೂರ್‌ ಅವರು ಸ್ಕೂಬಾ ಸ್ಕೂಲ್‌ ಮತ್ತು ಮರೇನಾ ಬೌಲ್ಡರ್‌ಬಗ್ಗೆ ಮಾಹಿತಿ ನೀಡಿದರು. ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ| ಜಯರಾಜ್‌ ಎಂ. ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next