Advertisement

Tragedy: ಶಾಲೆಗೆ ಹೋಗೆಂದು ಬೈದ ತಾಯಿ, ಸಿಟ್ಟಿನಲ್ಲಿ ಚಲಿಸುತ್ತಿರುವ ರೈಲಿಗೆ ತಲೆಕೊಟ್ಟ ಮಗಳು

11:09 AM Dec 08, 2023 | Team Udayavani |

ಉತ್ತರ ಪ್ರದೇಶ: ಶಾಲೆಗೆ ಹೋಗಲು ನಿರಾಕರಿಸುತ್ತಿದ್ದ ಮಗಳಿಗೆ ತಾಯಿ ಸಿಟ್ಟಿನಿಂದ ಬೈದಿದ್ದಕ್ಕೆ ಕೋಪಗೊಂಡ ಮಗಳು ಚಲಿಸುತ್ತಿರುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

ಖುಷಿ ಶರ್ಮಾ (13ವರ್ಷ) ಆತ್ಮಹತ್ಯೆ ಮಾಡಿಕೊಂಡಿರುವ ಬಾಲಕಿ.

ಘಟನೆ ವಿವರ: ಖುಷಿ ಶರ್ಮಾಗೆ ಶಾಲೆಗೆ ಹೋಗಲು ಇಷ್ಟವಿರಲಿಲ್ಲ ಅದಕ್ಕಾಗಿ ಪದೇ ಪದೇ ಶಾಲೆಗೆ ರಜೆ ಹಾಕುತ್ತಿದ್ದಳು ಇದರಿಂದ ಕೋಪಗೊಂಡ ತಾಯಿ ಮಗಳಿಗೆ ಗದರಿದ್ದಾರೆ ಅಲ್ಲದೆ ಕೋಪದಿಂದ ಕಪಾಳಕ್ಕೆ ಹೊಡೆದಿದ್ದಾರೆ. ಇದರಿಂದ ಕುಪಿತಗೊಂಡ ಮಗಳು ಶಾಲೆಗೆ ತೆರಳುವಂತೆ ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೊರಟು ಹೋದವಳು ಶಾಲೆಗೆ ಹೋಗದೆ ಅಲ್ವಾರ್-ಮಥುರಾ ರೈಲ್ವೇ ಟ್ರ್ಯಾಕ್ ಬಳಿ ಹೋಗಿದ್ದಾಳೆ ಅಲ್ಲಿ ರೈಲು ಬರುವ ತನಕ ಕಾದು ರೈಲು ಬಂದ ವೇಳೆ ಅದರ ಎದುರು ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ.

ಈ ಘಟನೆಯನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಘಟನಾ ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಪೊಲೀಸರು ಬಾಲಕಿಯ ವಿವರ ಪಡೆದು ಬಳಿಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ, ಸದ್ಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ: Tollywood: ಗೆಳತಿ ಆತ್ಮಹತ್ಯೆ ಪ್ರಕರಣದಲ್ಲಿ ʼಪುಷ್ಪʼ ನಟನ ಬಂಧನ; ಚಿತ್ರೀಕರಣಕ್ಕೆ ಅಡ್ಡಿ

Advertisement

Udayavani is now on Telegram. Click here to join our channel and stay updated with the latest news.

Next