Advertisement
“ಜಗತ್ತು ಪ್ರಸ್ತುತ ಕರೋನವೈರಸ್ ಮತ್ತು ಅದರ ಪರಿಣಾಮಗಳೊಂದಿಗೆ ವ್ಯವಹರಿಸುತ್ತಿದೆ. ಆದರೆ, ಭಯೋತ್ಪಾದನೆಯ ಬೆದರಿಕೆ ಅವ್ಯಾಹತವಾಗಿ ಮುಂದುವರಿದಿದೆ. ಗಡಿಯಾಚೆಗಿನ ಭಯೋತ್ಪಾದನೆಯೊಂದಿಗೆ ಯಾವುದೇ ರೀತಿಯ ಭಯೋತ್ಪಾದನೆಯನ್ನು ಯಾವುದೇ ರೀತಿಯಲ್ಲಿ ಸಮರ್ಥಿಸಲು ಸಾಧ್ಯವಿಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ. ಆದ್ದರಿಂದ ಇಂತಹ ಭಯೋತ್ಪಾದನೆಗೆ ಕಡಿವಾಣ ಹಾಕಬೇಕು. ಭಯೋತ್ಪಾದನೆಯನ್ನು ಎದುರಿಸುವುದು ಎಸ್ ಸಿಒ ಮೂಲ ಉದ್ದೇಶಗಳಲ್ಲಿ ಒಂದಾಗಿದೆ.'”ಎಸ್‍ಸಿಒ ಸುಧಾರಣೆ ಮತ್ತು ಆಧುನೀಕರಣದ ವಿಷಯಗಳ ಬಗ್ಗೆ ಚರ್ಚೆಗಳು ಪ್ರಾರಂಭವಾಗಿರುವುದು ಸಂತೋಷದ ಸಂಗತಿ. ಎಸ್‍ಸಿಒ ಮೂರನೇ ಅಧಿಕೃತ ಭಾಷೆಯಾಗಿ ಇಂಗ್ಲಿಷ್ ಅನ್ನು ಬೆಂಬಲಿಸಲು ನಾನು ಸದಸ್ಯ ರಾಷ್ಟ್ರಗಳಿಗೆ ಕರೆ ನೀಡುತ್ತೇನೆ ಎಂದು ಡಾ.ಎಸ್.ಜೈಶಂಕರ್ ನುಡಿದರು.
Advertisement
SCO Summit;ವಿಶ್ವದಲ್ಲಿ ಭಯೋತ್ಪಾದನೆ ದೊಡ್ಡ ಸವಾಲಾಗಿದೆ: ಸಚಿವ ಜೈಶಂಕರ್
03:37 PM May 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.