Advertisement

ವಿಶ್ವದ ಅತಿ ದೊಡ್ಡ ಕ್ಯಾಮೆರಾ ಅನಾವರಣ

07:18 PM Oct 20, 2022 | Team Udayavani |

ವಾಷಿಂಗ್ಟನ್‌: ವಿಶ್ವದ ಅತಿ ದೊಡ್ಡ ಕ್ಯಾಮೆರಾವನ್ನು ಅಮೆರಿಕದಲ್ಲಿ ಅನಾವರಣಗೊಳಿಸಲಾಗಿದೆ. ಲಾರ್ಜ್‌ ಸಿನೋಪ್ಟಿಕ್‌ ಸರ್ವೇ ಟೆಲಿಸ್ಕೋಪ್‌(ಎಪ್‌ಎಸ್‌ಎಸ್‌ಟಿ) ಎಂದು ಕರೆಸಿಕೊಳ್ಳುವ ಈ ಕ್ಯಾಮೆರಾವನ್ನು ಅಮೆರಿಕದ ಸಂಶೋಧನಾ ಸ್ಥಳ ಎಂದೇ ಪ್ರಸಿದ್ಧಿ ಪಡೆದಿರುವ, ಸಮುದ್ರ ಮಟ್ಟದಿಂದ 2,682 ಮೀಟರ್‌ ಎತ್ತರದಲ್ಲಿರುವ ಸೆರ್ರೋ ಪಚೋನ್‌ ಪರ್ವತದಲ್ಲಿ ಇರಿಸಲಾಗಿದ್ದು, ಶೀಘ್ರವೇ ಅದರ ಕಾರ್ಯಾರಂಭಿಸಲಾಗುವುದು ಎಂದು ತಿಳಿಸಲಾಗಿದೆ.

Advertisement

ಎಸ್‌ಎಲ್‌ಎಸಿ ನ್ಯಾಷನಲ್‌ ಆ್ಯಕ್ಸಿಲೇಟರ್‌ ಪ್ರಯೋಗಾಲಯದ ವಿಜ್ಞಾನಿಗಳ ಹಲವು ವರ್ಷದ ಪರಿಶ್ರಮದಿಂದ ತಯಾರಾಗಿರುವ ಈ ಕ್ಯಾಮೆರಾದಲ್ಲಿ 189 ಸಿಸಿಡಿ ಸೆನ್ಸರ್‌ಗಳಿವೆ. ಎಲ್ಲ ಸೆನ್ಸಾರ್‌ಗಳು 16 ಮಿ.ಮೀ.ನಷ್ಟು ವ್ಯಾಸ ಹೊಂದಿವೆ. ಅದಷ್ಟೇ ಅಲ್ಲದೆ, 1.57 ಮೀಟರ್‌ ವ್ಯಾಸದ ಸೂಪರ್‌ ಟೆಲಿಫೋಟೋ ಲೆನ್ಸ್‌ ಕೂಡ ಇದರಲ್ಲಿದೆ. ಇದು ಈವರೆಗೆ ವಿಶ್ವದಲ್ಲಿ ತಯಾರಿಸಲಾದ ಅತಿ ದೊಡ್ಡ ಲೆನ್ಸ್‌ ಎಂದು ಖ್ಯಾತಿ ಪಡೆದಿದೆ. ಒಟ್ಟಾರೆಯಾಗಿ 3.2ಗಿಗಾ ಪಿಕ್ಸೆಲ್‌/3200 ಮೆಗಾ ಪಿಕ್ಸೆಲ್‌ ಸಾಮರ್ಥ್ಯ ಇದರಲ್ಲಿದೆ. ಅಂದರೆ ಇದರಲ್ಲಿ ತೆಗೆಯುವಂತಹ ಫೋಟೋ 266 ಐಫೋನ್‌ 14 ಪ್ರೋನಲ್ಲಿ ತೆಗೆದ ಫೋಟೋಕ್ಕೆ ಸರಿಸಮವಾಗಿರಲಿದೆ. ಈ ಕ್ಯಾಮೆರಾ ಚಂದ್ರನ ಮೇಲಿನ ಧೂಳಿನ ಕಣವನ್ನೂ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿದೆ ಎಂದಿದ್ದಾರೆ ವಿಜ್ಞಾನಿಗಳು.

ಈ ವಿಶೇಷ ಕ್ಯಾಮೆರಾದ ಅಳವಡಿಕೆ ಕಾರ್ಯ ಬಹುತೇಕ ಮುಗಿದಿದೆ. ಇನ್ನೆರೆಡು ತಿಂಗಳುಗಳಲ್ಲಿ ಕ್ಯಾಮೆರಾವನ್ನು ಪರೀಕ್ಷೆ ನಡೆಸಲಾಗುವುದು. 2023ರ ದ್ವಿತೀಯಾರ್ಧದ ಸಮಯದಲ್ಲಿ ಮೊದಲ ಪರಿಪೂರ್ಣ ಫೋಟೋವನ್ನು ಈ ಕ್ಯಾಮೆರಾ ಕ್ಲಿಕ್ಕಿಸಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next