ತೀರ್ಥಹಳ್ಳಿ: ತಾಲೂಕಿನ ಕೋಣಂದೂರಿನ ಕೆ.ಎಲ್.ಶಿವಾನಿ ಇಸ್ರೋದ ಚಂದ್ರಯಾನ 3 ಯೋಜನೆಯಲ್ಲಿ ಕಾರ್ಯನರ್ವಹಿಸಿದ್ದಾರೆ. ಇಸ್ರೋದ ಟೆಲಿಮೆಟ್ರಿ ಟ್ರ್ಯಾಕಿಂಗ್ ಅಂಡ್ ಕಮಾಂಡ್ ನೆಟ್‌ವರ್ಕ್ ವಿಭಾಗದ ಡೆಪ್ಯೂಟಿ ಡೈರೆಕ್ಟರ್ ಜವಾಬ್ದಾರಿ ನಿಭಾಯಿಸಿದ್ದಾರೆ.
ಇವರು ಮಾಜಿ ಶಾಸಕ ಕೋಣಂದೂರು ಲಿಂಗಪ್ಪ ಅವರ ಪುತ್ರಿ.
ಅರಳಸುರಳಿಯ ನಿವೃತ್ತ ಶಿಕ್ಷಕ ಗೋವಿಂದರಾಮ ಉಡುಪರ ಪುತ್ರ ಸುಬ್ರಹ್ಮಣ್ಯ ಉಡುಪ, ಮೂಲತಃ ಬಾರ್ಕೂರು ಮೂಡುಕೇರಿ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ಬಳಿಯ ಶಾಸ್ತ್ರೀ ಕುಟುಂಬಸ್ಥರಾಗಿದ್ದು, ಬಾರ್ಕೂರು ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದರು.
ಪ್ರಸ್ತುತ ಅರಳಸುರಳಿಯಲ್ಲಿ ನೆಲೆಸಿದ್ದಾರೆ. ಇಸ್ರೊ ಸಂಸ್ಥೆಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿದ್ದಾರೆ.
ಚಂದ್ರಯಾನ-2 ಮತ್ತು ಚಂದ್ರಯಾನ- 3 ಎರಡರಲ್ಲೂ ತಂತ್ರಜ್ಞರಾಗಿ ಕಾರ್ಯ ನಿರ್ವಹಿಸಿದ್ದರು. ಚಂದ್ರಯಾನ-3 ರ ಹೊತ್ತಿಗೆ ಇವರು ಸೇವೆಯಿಂದ ನಿವೃತ್ತರಾಗಿದ್ದರೂ ಇಸ್ರೊ ಉಡುಪರನ್ನು ಕರೆಸಿಕೊಂಡು ಸೇವೆಯನ್ನು ಪಡೆದುಕೊಂಡಿತ್ತು.