Advertisement
ನೆದರ್ಲೆಂಡ್‌ನ ವಿಜ್ಞಾನಿಗಳ ತಂಡವು ಪರೀಕ್ಷೆಗೊಳಪಡಿಸಿದ ಸ್ಯಾಂಪಲ್‌ಗಳ ಪೈಕಿ ಶೇ.80ರಷ್ಟು ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್ ಇರುವುದು ದೃಢಪಟ್ಟಿದೆ. ಪ್ಲಾಸ್ಟಿಕ್‌ನ ಕಣಗಳು ಮಾನವ ಶರೀರದಲ್ಲೂ ಸಂಚರಿಸಿ, ಅಂಗಾಂಗಗಳಲ್ಲಿ ಉಳಿಯಬಲ್ಲದು ಎಂಬುದನ್ನು ಸಾಬೀತುಪಡಿಸುವ ಮಹತ್ವದ ಸಂಶೋಧನೆ ಇದಾಗಿದೆ.
22 ಮಂದಿ ಅಪರಿಚಿತ ದಾನಿಗಳ ರಕ್ತದ ಮಾದರಿಗಳನ್ನು ಈ ಸಂಶೋಧನೆಗೆ ಬಳಸಲಾಗಿತ್ತು. ಈ ಪೈಕಿ 17 ಮಾದರಿಗಳಲ್ಲಿ ಮೈಕ್ರೋಪ್ಲಾಸ್ಟಿಕ್‌ಗಳು ಪತ್ತೆಯಾಗಿವೆ. ಇದರಲ್ಲಿ ಅರ್ಧದಷ್ಟು ಸ್ಯಾಂಪಲ್‌ಗಳಲ್ಲಿ ಪಾಲಿಥೈಲೀನ್ ಟೆರೆಫ¤ಲೇಟ್(ಪಿಇಟಿ) ಅಂದರೆ ಪಾನೀಯಗಳ ಬಾಟಲಿಗಳನ್ನು ಮಾಡಲು ಬಳಸುವ ಪ್ಲಾಸ್ಟಿಕ್ ಪತ್ತೆಯಾಗಿದೆ.
Related Articles
Advertisement
ಇನ್ನು ಶೇ.36ರಷ್ಟು ಮಂದಿಯಲ್ಲಿ ಆಹಾರದ ಪ್ಯಾಕೇಜಿಂಗ್‌ಗೆ ಬಳಸುವ ಪಾಲಿಸ್ಟಿರೀನ್, ಶೇ.23ರಷ್ಟು ಸ್ಯಾಂಪಲ್‌ಗಳಲ್ಲಿ ಚೀಲಗಳ ಪ್ಯಾಕೇಜಿಂಗ್‌ಗೆ ಬಳಸುವ ಪಾಲಿಥೈಲೀನ್ ಪ್ಲಾಸ್ಟಿಕ್ ಪತ್ತೆಯಾಗಿದೆ.
ಇವುಗಳ ಪ್ರಮಾಣವು ಕಡಿಮೆಯಿದ್ದರೂ, ಅಂದರೆ ಪ್ರತಿ ಮಿಲಿಲೀಟರ್ ರಕ್ತದಲ್ಲಿ 1.6 ಮೈಕ್ರೋಗ್ರಾಂ ಆಗಿದ್ದರೂ, ಇದು ಎಚ್ಚರಿಕೆಯ ಕರೆಗಂಟೆಯೇ ಆಗಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.