Advertisement

ಪುಸ್ತಕದ ಅಂತ್ಯ ಹೇಳಿದ ಸಹೋದ್ಯೋಗಿಯನ್ನು ಇರಿದ ರಶ್ಯ ವಿಜ್ಞಾನಿ

12:07 PM Oct 30, 2018 | udayavani editorial |

ಮಾಸ್ಕೋ : ತಾನು ಓದುತ್ತಿದ್ದ ಕುತೂಹಲಕಾರಿ ಪುಸ್ತಕವೊಂದರ ಅಂತ್ಯವನ್ನು ತನ್ನ ಸ್ನೇಹಿತನು ತನ್ನಲ್ಲಿ ಬಹಿರಂಗಪಡಿಸಿದ ಕಾರಣಕ್ಕೆ ಭಾವನಾತ್ಮಕವಾಗಿ ಹತಾಶನಾದ ರಶ್ಯದ ಅಂಟಾರ್ಕಟಿಕ್‌ ಸ್ಟೇಶನ್‌ನ ವಿಜ್ಞಾನಿ,  ತನ್ನ ಸಹೋದ್ಯೋಗಿಯನ್ನು ಇರಿದು ಗಾಯಗೊಳಿಸಿದ ಘಟನೆ ವರದಿಯಾಗಿದೆ.

Advertisement

55ರ ಹರೆಯದ ಸಂಶೋಧಕ ಸೆಗೇì ಸವಿತ್‌ಸ್ಕಿ ಮತ್ತು 52ರ ಹರೆಯದ ತನ್ನ ಸಹೋದ್ಯೋಗಿ ಒಲೆಗ್‌ ಬೆಲೊಗುಝೊವ್‌ ಅವರು ಜತೆಯಾಗಿ ಅಂಟಾರ್ಕಟಿಕಾದ ದುರ್ಗಮ ಪ್ರದೇಶದಲ್ಲಿನ ಹೊರ ಠಾಣೆಯಲ್ಲಿ ದೀರ್ಘ‌ ತಾಸುಗಳ ಕಾಲ ಪುಸ್ತಕ ಓದುತ್ತಾ ಕಳೆಯುತ್ತಿದ್ದರು. 

ಆ ಸಂದರ್ಭದಲ್ಲಿ ಬೆಲೊಗುಝೋವ್‌ ಅವರು ಪುಸ್ತಕದ ಅಂತ್ಯ ಏನೆಂಬುದನ್ನು ಪದೇ ಪದೇ ಬಹಿರಂಗಪಡಿಸುತ್ತಿದ್ದರು. ಇದರಿಂದ ಸವಿತ್‌ಸ್ಕಿ ತೀವ್ರವಾಗಿ ನೊಂದು ಕೊಳ್ಳುತ್ತಿದ್ದರು. ಕೊನೆಗೊಮ್ಮೆ (ಅ.9ರಂದು) ಅವರು ಹತಾಶೆಯಿಂದ ಸ್ನೇಹಿತನನ್ನು  ಕಿಂಗ್‌ ಜಾರ್ಜ್‌ ದ್ವೀಪದಲ್ಲಿನ ಬೆಲಿಂಗ್‌ಶಾಸೆನ್‌ ಸ್ಟೇಶನ್‌ನಲ್ಲಿ  ಇರಿದು ಗಾಯಗೊಳಿಸಿದರು ಎಂದು ವರದಿ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next