Advertisement

“ವೈಜ್ಞಾನಿಕತೆ ಬೆಳೆದಂತೆ ನೀರು ಪೋಲು , ಮಾಲಿನ್ಯ ಹೆಚ್ಚಳ’

12:47 PM Feb 27, 2017 | Team Udayavani |

ಬಂಟ್ವಾಳ :  ಮಾನವನು ತನ್ನ ಎಲ್ಲ ಚಟುವಟಿಕೆಗಳಿಗೆ ನೀರನ್ನು ಅವಲಂಬಿಸಿದ್ದಾನೆ. ವೈಜ್ಞಾನಿಕತೆ ಬೆಳೆದಂತೆ ನೀರಿನ ಪೋಲು ಹಾಗೂ ಮಾಲಿನ್ಯವೂ ಹೆಚ್ಚಾಗುತ್ತಿದೆ. ಅದರ ಬಗ್ಗೆ ವಿದ್ಯಾರ್ಥಿಗಳಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ತಿಳಿಯಪಡಿಸಿದಾಗ ವಿಷಯವು ಹೆಚ್ಚು ಮನದಟ್ಟಾಗುತ್ತದೆ. ಕೃಷಿ ಚಟುವಟಿಕೆಯಲ್ಲಿ ಆಸಕ್ತಿ ಬೆಳೆಸುವುದು ಹಾಗೂ ನೀರಿನ ಮಿತವ್ಯಯ ಬಳಕೆ ತಿಳಿಯುವ ನಿಟ್ಟಿನಲ್ಲಿ ಶಾಲೆಯಲ್ಲಿ ತೆಗೆದುಕೊಂಡ ಕ್ರಮ ಶ್ಲಾಘನೀಯವಾದುದು ಎಂದು ಜಿ.ಪಂ. ಸದಸ್ಯೆ ಮಂಜುಳಾ ಮಾವೆ ಹೇಳಿದರು.

Advertisement

ಅವರು ವೀರಕಂಭ ಗ್ರಾಮ ಮಜಿ ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಅಡಿಕೆ ಸಸಿಗಳು ಹಾಗೂ ತೆಂಗಿನ ಮರಗಳಿಗೆ ಮೈರ ದಿ|  ವಿಶ್ವನಾಥ ಶೆಟ್ಟಿಯವರ ಸ್ಮರಣಾರ್ಥ ಅವರ ಮಕ್ಕಳು ಕೊಡುಗೆಯಾಗಿ ನೀಡಿದ ಹನಿ ನೀರಾವರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು,ಈ ಸಂದರ್ಭದಲ್ಲಿ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ್‌, ವೀರಕಂಭ ಗ್ರಾ.ಪಂ. ಅಧ್ಯಕೆ ಪ್ರೇಮಲತಾ, ಉಪಾಧ್ಯಕ್ಷ ನಿಶಾಂತ್‌ ರೈ, ಸದಸ್ಯರಾದ ರಾಮಚಂದ್ರ ಪ್ರಭು, ಜನಾರ್ದನ, ಪದ್ಮಾವತಿ, ಎಸ್‌.ಡಿ.ಎಂ.ಸಿ. ಅಧ್ಯಕ್ಷ ಸಂಜೀವ ಮೂಲ್ಯ ಹಾಗೂ ಸದಸ್ಯರು, ಶಿಕ್ಷಣ ಸಂಯೋಜಕಿ ಪುಷ್ಪಾ, ಸ.ಸಂ. ವ್ಯಕ್ತಿ ಆರತಿ, ಮುಖ್ಯ ಶಿಕ್ಷಕ ನಾರಾಯಣ ಪೂಜಾರಿ  ಹಾಗೂ ಶಾಲಾ ಇಕೋಕ್ಲಬ್‌ನ ವಿದ್ಯಾರ್ಥಿಗಳು 
ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next