Advertisement

ಭೀಕರ ವರ್ಷ 2020 ಅಲ್ಲ ; 536..! ಒಂದೂವರೆ ವರ್ಷ ಸೂರ್ಯನೇ ಕಾಣಿಸಿರಲಿಲ್ಲವಂತೆ !

09:24 AM Apr 27, 2021 | Team Udayavani |

ಹೊಸದಿಲ್ಲಿ : ಮನುಕುಲದ ಇತಿಹಾಸದಲ್ಲಿ “ಅತ್ಯಂತ ಕೆಟ್ಟ ವರ್ಷ’ ಯಾವುದು ಎಂಬ ಪ್ರಶ್ನೆಗೆ ಪ್ರಸ್ತುತ ಜನರು ಹೇಗೆ ಉತ್ತರಿಸಬಹುದು? ಕೊರೊನಾ ಕಾರಣದಿಂದ 2020 ಮತ್ತು 2021 ಎಂದು ಉತ್ತರಿಸುವುದು ನಿಸ್ಸಂದೇಹ.

Advertisement

ಆದರೆ ಇದಕ್ಕಿಂತಲೂ ಕಠಿನಾತಿಕಠಿನ ಪರಿಸ್ಥಿತಿ ಇತಿಹಾಸದ ಪುಟಗಳಲ್ಲಿ ದಾಖಲೆಯಾಗಿ ಉಳಿದಿದೆ ಎಂದರೆ ನಂಬುತ್ತೀರಾ? ಐರೋಪ್ಯ ಒಕ್ಕೂಟದಲ್ಲಿ ಕ್ರಿಸ್ತಶಕ 536ರಲ್ಲಿ ಭೀಕರ ಜ್ವಾಲಾಮುಖೀ ಸ್ಫೋಟದಿಂದ ಉಂಟಾದ ಅತ್ಯಂತ ಚಳಿ ಮತ್ತು ಪ್ರತಿಕೂಲ ಹವೆಯಿಂದ ಜನರು ಕಂಗೆಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಜೀವ ಕಳೆದುಕೊಂಡಿದ್ದರು.

ಈ ಬಗ್ಗೆ ಹಾರ್ವರ್ಡ್‌ ವಿ.ವಿ.ಯ ಪ್ರಾಚ್ಯ ಸಂಶೋಧಕ ಮೈಕೆಲ್‌ ಮ್ಯಾಕ್ರೋಮಿಕ್‌ ಐತಿಹಾಸಿಕ ದಾಖಲೆಗಳನ್ನು ಶೋಧಿಸಿದ್ದು, 536ನೇ ಇಸವಿ ಮಾನವ ಇತಿಹಾಸದ “ಅತ್ಯಂತ ಕೆಟ್ಟ ಮತ್ತು ಕಠಿನ ವರ್ಷ’ ಎಂದು ಘೋಷಿಸಿದ್ದಾರೆ. ಜ್ವಾಲಾಮುಖೀಯಿಂದ ಹೊರಬಂದ ಹೊಗೆಯಿಂದಾಗಿ ಸೂರ್ಯನ ಬೆಳಕು ಭೂಮಿಗೆ ತಲುಪದಂಥ ಸ್ಥಿತಿ ಉಂಟಾಗಿತ್ತು. ಇದರಿಂದ ಐರೋಪ್ಯ ಒಕ್ಕೂಟ, ಮಧ್ಯಪ್ರಾಚ್ಯ, ಚೀನ ಮತ್ತು ಏಷ್ಯಾದ ಹಲವು ಭಾಗಗಳಲ್ಲಿ ಜನರು ಒಂದೂವರೆ ವರ್ಷ ಕಾಲ ಹಗಲು -ರಾತ್ರಿ ಯಾವುದು ಎಂದು ಗೊತ್ತಾಗದ ಸ್ಥಿತಿಯಲ್ಲಿದ್ದರು.

“ದ ಬೈಝಾಂಟೈನ್‌ ಹಿಸ್ಟಾರಿಯನ್‌ ಪ್ರೊಕೋಪಿಯಸ್‌’ನಲ್ಲಿ ಈ ಅಂಶ ಕಣ್ಣಿಗೆ ಕಟ್ಟಿದಂತೆ ದಾಖಲಾಗಿದೆ ಎಂಬುದನ್ನು ಮ್ಯಾಕ್ರೋಮಿಕ್‌ ಹುಡುಕಿ ತೆಗೆದಿದ್ದಾರೆ.

Advertisement

ಬೆಳೆ ನಷ್ಟ
ಈ ಪ್ರತಿಕೂಲ ಹವಾಮಾನದಿಂದಾಗಿ ಬೆಳೆ ಬೆಳೆಯಲು ಸಾಧ್ಯವಾಗದೆ, ಆಹಾರಕ್ಕಾಗಿ ಹಾಹಾಕಾರ ಉಂಟಾಗಿತ್ತು. ಐರ್ಲೆಂಡ್‌ನ‌ ಆ ಕಾಲದ ಧಾರ್ಮಿಕ ಮುಖಂಡರು ಕ್ರಿಸ್ತಶಕ 536ರಿಂದ 539ರ ವರೆಗೆ ಆಹಾರ ಉತ್ಪಾದನೆ ಮಾಡಲು ಸಾಧ್ಯವಾಗದ ವರ್ಷಗಳು ಎಂದು ಬಣ್ಣಿಸಿರುವುದು ದಾಖಲಾಗಿದೆ.

ಮಾದರಿ ಪರಿಶೀಲನೆ
ಜಗತ್ತಿನ ಹಲವು ಭಾಗಗಳಿಂದ ಸಂಗ್ರ ಹಿಸ ಲಾಗಿರುವ ಮಂಜುಗಡ್ಡೆಯ ಮಾದರಿ ಗಳನ್ನು ಸಂಶೋಧಕರು ಪರಿ ಶೀಲನೆ ನಡೆಸಿ ದ್ದಾರೆ. ಕ್ರಿಸ್ತಶಕ 536ರಲ್ಲಿ ಇದ್ದ ಪ್ರತಿ ಕೂಲ ಹವಾಮಾನದ ಬಗ್ಗೆ ಅಧ್ಯ ಯನ ನಡೆಸಿ ದ್ದಾರೆ. 2,300 ವರ್ಷ ಗಳಲ್ಲಿಯೇ ಅದು ಅತ್ಯಂತ ಕನಿಷ್ಠ ತಾಪದ ವರ್ಷವೆಂದು ದಾಖಲಾಗಿದೆ. ಈ ಅವಧಿಯಲ್ಲಿ ಬರಗಾಲ, ಹಸಿವು, ದುಃಖದ ಅತ್ಯಂತ ಕಠಿನ ಪರಿಸ್ಥಿತಿಯನ್ನು ಜನರು ಎದುರಿಸಿದ್ದರು ಎಂದು ಅಧ್ಯಯನದಿಂದ ತಿಳಿದುಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next