ಚಿಂಚೋಳಿ (ಸೂಗಯ್ಯ ಹಿರೇಮಠ ವೇದಿಕೆ): ವಿಜ್ಞಾನಿಗಳು ಹುಟ್ಟು ಹಾಕಿರುವ ಬಾಹ್ಯಕಾಶ ಸಂಸ್ಥೆಯನ್ನು ಇಡೀ ಜಗತ್ತೇ ನೋಡುವಂತೆ ಆಗಿದೆ. ರಾಕೇಟ್ ಉಡಾವಣೆಯಿಂದ ಯುವ ತಂತ್ರಜ್ಞಾನ-ವಿಜ್ಞಾನ ಚಂದ್ರ ಲೋಕಕ್ಕೆ ಹೋಗುವಂತಾಯಿತು. ನ್ಯೂಕ್ಲಿಯರ್ ಪ್ರಯೋಗ ಮಾಡುವಂತಹ ಶಕ್ತಿ ನಮ್ಮ ವಿಜ್ಞಾನಿಗಳಲ್ಲಿ ಇದೆ ಎಂದು ಡಾ|ಎಂ.ಎಸ್.ಜೋಗದ ಹೇಳಿದರು.
ಪಟ್ಟಣದಲ್ಲಿ ನಡೆದ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಭವಿಷ್ಯದ ಬೆಳಕು ಗೋಷ್ಟಿ ಕಾರ್ಯಕ್ರಮದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯದ ಕುರಿತು ಅವರು ಮಾತನಾಡಿದರು.
ವಿಜ್ಞಾನ ಎಂದರೆ ಜಟಿಲ ಸಮಸ್ಯೆ ಸಮಸ್ಯೆ ಬಗೆಹರಿಸುವುದಾಗಿದೆ. ವೈಜ್ಞಾನಿಕ ಚಿಂತನೆ ಇಂದಿನ ಅವಶ್ಯಕತೆಯಾಗಿದೆ. ಯುವ ಶಕ್ತಿಗೆ ಸರಿಯಾದ ವಿಜ್ಞಾನ ತಾಂತ್ರಿಕತೆ ಸಿಗುತ್ತಿಲ್ಲ. ಸ್ವದೇಶಿ ವಿಜ್ಞಾನ ಅಂದೋಲನ ಪ್ರಾರಂಭಿಸಲಾಗಿದ್ದು, ಐದು ಸಾವಿರ ಸದಸ್ಯೆತ್ವ ಹೊಂದಿದೆ. ವಿಜ್ಞಾನ ಸಂಶೋಧನೆ ಕನ್ನಡದಲ್ಲಿಯೂ ಆಗಬೇಕು ರೈತರಿಗೆ ವಿಜ್ಞಾನದ ಮಹತ್ವ ಸಿಗಬೇಕು. ವಿಜ್ಞಾನದ ಜ್ಞಾನ ಮಾತೃ ಭಾಷೆಯಲ್ಲಿ ಆದರೆ, ಅದು ಜನರಿಗೆ ಮುಟ್ಟುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರೊ| ಎಂ.ಬಿ.ಅಂಬಲಗಿ 371ನೇ(ಜೆ)ಕಲಂ ಸಾಧ್ಯಾ ಸಾಧ್ಯತೆಗಳ ಕುರಿತು ಮಾತನಾಡಿ, 371(ಜೆ)ನೇ ಕಲಂ ಹುಟ್ಟಿದ್ದು ಇಲ್ಲಿಂದಲೇ. ಹೋರಾಟವು ನಡೆಯಿತು.ವಿದ್ಯಾರ್ಥಿಗಳ ಚಳವಳಿಯಿಂದ ನಮ್ಮ ಭಾಗಕ್ಕೆ ಸ್ಥಾನಮಾನ ಸಿಗುವಂತಾಗಿದೆ. ನಮ್ಮ ಭಾಗಕ್ಕೆ ಸಿಗಬೇಕಾದ ಮುಖ್ಯಮಂತ್ರಿ ಸ್ಥಾನ ಸಿಗುವಲ್ಲಿ ದ್ರೋಹ ವೆಸಲಾಗಿದೆ. ಕೃಪಾಂಕಗಳು ಸಿಗುತ್ತಿಲ್ಲ. ಟಿಇಟಿ ಪರೀಕ್ಷೆಯಲ್ಲಿ ನಮ್ಮಗೆ ಭಾರಿ ಅನ್ಯಾಯವಾಗಿದೆ ಎಂದರು.
ಜಿಪಂ ಸದಸ್ಯ ಗೌತಮ ಪಾಟೀಲ, ಚಂದ್ರಶೇಖರ ಕರಜಗಿ, ಡಾ| ವಾಸುದೇವ ಸೇಡಂ, ಡಾ| ವೆಂಕಟರೆಡ್ಡಿ ರುದ್ರವಾರ
ಮಾತನಾಡಿದರು. ವೀರಣ್ಣ ಸುಗಂ ಸ್ವಾಗತಿಸಿದರು, ಎಸ್.ವಿ ವಂದಿಸಿದರು. ನಂತರ ಕವಿಗೋಷ್ಠಿ ನಡೆಯಿತು.