Advertisement

ವಿಜ್ಞಾನ ಮನುಷ್ಯನ ಅವಿಭಾಜ್ಯ ಅಂಗ

07:13 AM Mar 01, 2019 | |

ಕೋಲಾರ: ಇತ್ತೀಚಿನ ದಿನಗಳಲ್ಲಿ ವಿಜ್ಞಾನ ಮನುಷ್ಯನ ಅವಿಭಾಜ್ಯವಾಗಿದೆ. ಅದಿಲ್ಲದ ಕ್ಷೇತ್ರವೇ ಇಲ್ಲ. ಬದುಕಿನ ಪ್ರತಿ ಹಂತದಲ್ಲೂ ಹಾಸು ಹೊಕ್ಕಾಗಿದೆ ಎಂದು ಉತ್ತರ ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಟಿ.ಡಿ.ಕೆಂಪರಾಜ್‌ ತಿಳಿಸಿದರು.

Advertisement

ನಗರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಭೌತ, ಜೀವ, ರಸಾಯನ ಶಾಸ್ತ್ರದ ವಿಷಯಕ್ಕೆ ಅಷ್ಟೇ ಸಿಮೀತಗೊಂಡಿಲ್ಲ. ಪ್ರತಿಯೊಂದು ವಿಷಯವೂ ಮೊದಲು ಆರಂಭವಾಗುವುದು ವಿಜ್ಞಾನದಿಂದಲೇ. ತಾನಾಗಿಯೇ ವಿಜ್ಞಾನ ಬೆಳೆಯಲು ಸಾಧ್ಯವಿಲ್ಲ. ಸಂಶೋಧನೆ, ಅಧ್ಯಯನದಿಂದ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ವಿಜ್ಞಾನ ದಿನಾಚರಣೆಗೆ ಅಷ್ಟೇ ಸಿಮೀತಗೊಳ್ಳಬಾರದು. ಗ್ರಾಮೀಣ ಭಾಗದ ಸಾರ್ವಜನಿಕರಿಗೂ ವಿಜ್ಞಾನದ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ. ಅವಿಭಜಿತ ಕೋಲಾರ ಜಿಲ್ಲೆಯ ವಿದ್ಯಾರ್ಥಿಗಳು ಬಿಎಸ್ಸಿ ಪದವಿಗೆ ಹೆಚ್ಚು ಸೇರುತ್ತಿದ್ದು, ಸಮಾಜದ ಅಭಿವೃದ್ಧಿಗೆ ಪೂರಕ ವಿಚಾರಗಳನ್ನು ಮಂಡಿಸಲು ಮುಂದಾಗಬೇಕು ಎಂದು ತಿಳಿಸಿದರು.

ವಿಜ್ಞಾನದ ರಾಣಿ: ವಿಜ್ಞಾನ ಶಿಕ್ಷಣ ಇಂದು ಎಂಜಿನಿಯರಿಂಗ್‌, ವೈದ್ಯಕೀಯ ಸೇರಿದಂತೆ ಎಲ್ಲಾ ಕಡೆಯೂ ಇದೆ. ವಿಜ್ಞಾನದಲ್ಲಿ ಗಣಿತಕ್ಕೆ ಹೆಚ್ಚಿನ ಮಹತ್ವವಿದ್ದು, ವಿಜ್ಞಾನದ ರಾಣಿ ಎಂದೇ ಕರೆಯಾಗುತ್ತದೆ ಎಂದು ಹೇಳಿದರು. ರಾಮನ್‌ ಸಂಶೋಧನಾ ಸಂಸ್ಥೆಯ ಸಂಯೋಜಕ ಪ್ರೊ.ಸಂದೀಪ್‌ ಕುಮಾರ್‌ ವಿಶೇಷ ಉಪನ್ಯಾಸ ನೀಡಿ, ವಿಜ್ಞಾನ ಕ್ಷೇತ್ರದಲ್ಲಿ ನೋಬಲ್‌ ಪ್ರಶಸ್ತಿ ಪಡೆದುಕೊಳ್ಳುವುದು ಸುಲಭವಲ್ಲ. ರಾಮನ್‌ ಅವರ ಸತತ ಪ್ರಯತ್ನದ ಸಾಧನೆಯ ಫಲವಾಗಿ ನೋಬೆಲ್‌ ಪ್ರಶಸ್ತಿ ಲಭಿಸಿದೆ ಎಂದು ತಿಳಿಸಿದರು.

ಯಶಸ್ಸು ಕಾಣಿ: ಇಂದಿನ ಸಂಶೋಧನಾ ವಿದ್ಯಾರ್ಥಿಗಳ ಸಾಧನೆಗೆ ಸಿ.ವಿ.ರಾಮನ್‌ ಸಾಧನೆ ಪೂರಕವಾಗಿದೆ. ರಾಮನ್‌ ಪ್ರತಿ ಕ್ಷೇತ್ರದಲ್ಲೂ ಮಂಡಿಸಿದ ವಿಚಾರಗಳು ಸಮಾಜದ ಅಭಿವೃದ್ಧಿಗೆ ಪೂರಕವಾಗಿದ್ದವು. ಮಂಡಿಸಿದ ವಿಚಾರಗಳು ಯಾವುದೇ ತಿರಸ್ಕೃತಗೊಂಡಿಲ್ಲ. ಅವರ ಹಾದಿಯಲ್ಲಿ ಪ್ರಯತ್ನಿಸಿದರೆ ಯಶಸ್ಸು ಕಾಣಬಹುದು ಎಂದು ಹೇಳಿದರು.

Advertisement

ವಿದ್ಯಾರ್ಥಿಗಳು ವಿಜ್ಞಾನ ಸಂಶೋಧನೆ, ಅಧ್ಯಯನದಲ್ಲಿ ಸಾಧನೆ ಮಾಡಲು ಸಿ.ವಿ.ರಾಮನ್‌ ಮಾರ್ಗದರ್ಶನ ಸ್ಫೂರ್ತಿ ನೀಡುತ್ತದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕ ಪ್ರೊ.ವೆಂಕಟರಾಮನ್‌ ಅಭಿಪ್ರಾಯಪಟ್ಟರು. ಸಿ.ವಿ.ರಾಮನ್‌ ಅವರು ಸಮಾಜದ ಅಭಿವೃದ್ಧಿಗೆ ಅಗತ್ಯವಿರುವ ವಿಚಾರಗಳ ಮೇಲೆ ಅಧ್ಯಯನ ನಡೆಸಿ ಕೊಡುಗೆಯಾಗಿ ನೀಡಿದ್ದಾರೆ. ಅವರ ಸೇವೆಯನ್ನು ಪರಿಗಣಿಸಿ ಸರ್ಕಾರವೂ ನೋಬಲ್‌ ಪ್ರಶಸ್ತಿ ನೀಡಿ ಗೌರವಿಸಿದೆ ಎಂದರು.

ಅಧ್ಯಯನ, ಸಂಶೋಧನೆಯಿಲ್ಲದೆ ಯಾವುದೇ ವಿಚಾರವನ್ನು ಮಂಡಿಸಲು ಸಾಧ್ಯವಿಲ್ಲ. ರಾಮನ್‌ ಅವರು ಸಾಧನೆಯನ್ನು ಸ್ಫೂರ್ತಿಯಾಗಿ ತೆಗೆದುಕೊಂಡರೆ ವಿದ್ಯಾರ್ಥಿಗಳು ತಮ್ಮ ಜೀವನ ಗುರಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ವಿವಿಯ ರಿಜಿಸ್ಟ್ರಾರ್‌ ಪ್ರೊ.ಎಂ.ಎಸ್‌.ರೆಡ್ಡಿ, ಮೌಲ್ಯ ಮಾಪನ ರಿಜಿಸ್ಟ್ರಾರ್‌ ಕೆ.ಜನಾರ್ಧನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next