ಹೊಳೆನರಸೀಪುರ: ವಿಜ್ಞಾನ ಎಷ್ಟೇ ಮುಂದುವರಿ ದಿದ್ದರೂ ಸಹ ಮನುಷ್ಯನ ದೇಹದಲ್ಲಿರುವ ರಕ್ತವನ್ನು ಕೃತಕವಾಗಿ ತಯಾರಿಸಲು ಅಥವಾ ಸೃಷ್ಟಿಸಲು ಸಾಧ್ಯವಿಲ್ಲ. ಇದನ್ನು ಮನುಷ್ಯರು ಅರ್ಥ ಮಾಡಿಕೊಳ್ಳ ಬೇಕಾಗಿದೆ ಎಂದು ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಉಪನ್ಯಾಕ ಕೃಷ್ಣಮೂರ್ತಿ ನುಡಿದರು.
ಪಟ್ಟಣದ ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಸರ್ಕಾರಿ ಗೃಹ ವಿಜ್ಞಾನ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ಏಡ್ಸ್ ದಿನಾ ಚರಣೆಯಲ್ಲಿ ಮಾತನಾಡಿ, ನಾವು ಈಗಾಗಲೇ ಮಂಗಳ ಗ್ರಹ ಸೇರಿದಂತೆ ಅನೇಕ ಗ್ರಹಗಳಿಗೆ ಪ್ರಯಾಣ ಮಾಡಿ, ಉತ್ತಮ ಸಾಧನೆ ಮಾಡಿದ್ದೇವೆ. ಆದರೆ, ರಕ್ತವನ್ನು ಮಾತ್ರ ತಯಾರಿಸಲು ಸಾಧ್ಯವಾಗಿಲ್ಲ.
ರಕ್ತದಾನದಿಂದ ಜೀವ ಉಳಿಸಲು ಸಾಧ್ಯ. ವಿದ್ಯಾ ರ್ಥಿಗಳು ಸ್ವಯಂ ಪ್ರೇರಿತ ರಕ್ತದಾನ ಮನುಕುಲದ ಉಳಿಯಲು ಸಹಕಾರಿಯಾಗಿದೆ ಎಂದರು. ವೈದ್ಯೆ ರೇಖಾ ಮಾತನಾಡಿ, ಪ್ರತಿಯೊಬ್ಬರು ಅಸುರಕ್ಷಿತ ಲೈಂಗಿಕದಿಂದ ದೂರ ಇರಬೇಕು. ಮದುವೆಗೆ ಮೊದಲು ಬ್ರಹ್ಮಚಾರತ್ವ ಅನುಸರಿಸಬೇಕು.
ಇದನ್ನೂ ಓದಿ;-ಒಮಿಕ್ರಾನ್ ಸೋಂಕು ಪತ್ತೆ ಎಫೆಕ್ಟ್: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಅಂಕ ಭಾರೀ ಕುಸಿತ
ಆಕರ್ಷಣೆಗೆ ಒಳಗಾಗಿ ಅಸುರಕ್ಷಿತ ಲೈಂಗಿಕಕ್ಕೆ ಬಿದ್ದರೆ ಏಡ್ಸ್ ನಂತರ ಮಹಾರೋಗದಿಂದ ಸಂಕಷ್ಟ ಅನುಸರಿಸಬೇಕಾಗುತ್ತದೆ ಎಂದು ಹೇಳಿದರು. ಜಿಲ್ಲಾ ರಕ್ತನಿಧಿ ವೈದ್ಯೆ ನಾಗಲಕ್ಷ್ಮೀ ಮಾತನಾಡಿ, ಸ್ವಯಂ ರಕ್ತದಾನಕ್ಕೆ ಮುಂದಾಗಿರುವ ವಿದ್ಯಾರ್ಥಿಗಳ ಹಂಬಲ ಉತ್ತಮವಾಗಿದೆ. ಆದರೆ, ಹೆಣ್ಣು ಮಕ್ಕಳ ಕಾಲೇಜು ಆಗಿರುವುದರಿಂದ ಹೆಣ್ಣುಮಕ್ಕಳಿಗೆ ಅನೇಕ ಸಂಕಷ್ಟಗಳು ಇರುತ್ತದೆ. ರಕ್ತ ನೀಡುವ ಮೊದಲು ಆರೋಗ್ಯ ಕಾಪಾಡಿಕೊಂಡು ರಕ್ತದಾನ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಬಿ.ಜಯಲಕ್ಷ್ಮೀ, ಸಾರ್ವಜನಿಕ ಆಸ್ಪತ್ರೆ ಐಸಿಟಿಯು ವಿಭಾಗದ ಭಾನುಶ್ರೀ ಮಾತ ನಾಡಿ, ತಾಲೂಕು ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಆರ್ .ಬಿ.ಪುಟ್ಟೇಗೌಡ ಮಾತನಾಡಿದರು. ಕನ್ನಡ ಉಪನ್ಯಾಸಕಿ ಡಾ.ಭಾರತೀದೇವಿ ವಂದಿಸಿದರು.