Advertisement

ಅಡುಗೆಗೆ ಮಾತ್ರ ಬಳಸೋದಲ್ಲ… ಜಾಯಿಕಾಯಿಯಲ್ಲಿದೆ ಹಲವು ಔಷಧೀಯ ಗುಣ…

12:48 PM Nov 28, 2022 | Team Udayavani |

ಜಾಯಿಕಾಯಿ, ಹಿಂದಿನಿಂದಲೂ ಭಾರತೀಯರು ಸಾಮಾನ್ಯವಾಗಿ ಬಳಸುವ ಮಸಾಲ ವಸ್ತು. ಅಡಕೆಯಂತೆ ಕಾಣುವ, ಸುವಾಸನಾಭರಿತ ಕಾಯಿಯನ್ನು ಅಡುಗೆಯಲ್ಲಷ್ಟೇ ಅಲ್ಲ, ಆಯುರ್ವೇದದಲ್ಲೂ ಬಳಸುತ್ತಾರೆ. ಓಹ್‌, ಇದಾ? ಇದು, ಅಜ್ಜಿಕಾಲದ ಮನೆಮದ್ದು ಎಂದು ಮೂಗು ಮುರಿಯಬೇಡಿ. ಯಾಕಂದ್ರೆ, ಜಾಯಿಕಾಯಿಯಲ್ಲಿ ಔಷಧೀಯ ಗುಣಗಳಿರುವುದು ವೈಜ್ಞಾನಿಕ ಸಂಶೋಧನೆಗಳಲ್ಲೂ ದೃಢಪಟ್ಟಿವೆ.

Advertisement

– ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಪ್ರಮಾಣ ಹೆಚ್ಚಿರುವುದರಿಂದ ಜಾಯಿಕಾಯಿಯು, ನರಕೋಶಗಳಿಗೆ ಹಾನಿಯಾಗುವುದನ್ನು ತಡೆಯುತ್ತದೆ.

-ಪಿತ್ಥ, ವಾಕರಿಕೆ, ಹೊಟ್ಟೆನೋವು ಕಾಡಿದಾಗ ಜಾಯಿಕಾಯಿಯ ಕಷಾಯ ಕುಡಿಯಬಹುದು.

-ಹಸಿವು ಹೆಚ್ಚಿಸುವ ಗುಣವೂ ಇದಕ್ಕಿದೆ.

-ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಅಂಶಗಳನ್ನು ಹೊಂದಿರುವ ಜಾಯಿಕಾಯಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Advertisement

-ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುವ ಗುಣ ಜಾಯಿಕಾಯಿಗಿದೆ.

-ಜಾಯಿಕಾಯಿಯಲ್ಲಿ ಬಿ-ಕಾಂಪ್ಲೆಕ್ಸ್‌, ವಿಟಮಿನ್‌ ಸಿ, ಫಾಲಿಕ್‌ ಆ್ಯಸಿಡ್‌ ಹೇರಳವಾಗಿವೆ.

-ಜಾಯಿಕಾಯಿಯನ್ನು ತೇಯ್ದು, ಹಚ್ಚಿದರೆ ಕಣ್ಣಿನ ಸುತ್ತಲಿನ ಕಪ್ಪು ವರ್ತುಲ ಕಡಿಮೆಯಾಗುತ್ತದೆ.

-ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಔಷಧಗಳಲ್ಲಿ ಜಾಯಿಕಾಯಿಯನ್ನು ಬಳಸುತ್ತಾರೆ.

-ಜಾಯಿಕಾಯಿಯ ಪುಡಿಯನ್ನು ಮೈಗೆ ಉಜ್ಜಿ ಸ್ನಾನ ಮಾಡುವುದರಿಂದ, ಕಜ್ಜಿ, ತುರಿಕೆ, ಮೊಡವೆಯಂಥ ಚರ್ಮರೋಗಗಳು ಗುಣವಾಗುತ್ತವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next