ಹೊಸದಿಲ್ಲಿ: ದೇಶದಲ್ಲಿ ಮೂರನೇ ಅಲೆಯ ಭೀತಿಯ ನಡುವೆಯೇ ಪಂಜಾಬ್ ಮತ್ತು ಛತ್ತೀಸ್‌ಗಢದಲ್ಲಿ ಶಾಲೆಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಛತ್ತೀಸ್‌ಗಢದಲ್ಲಿ 10 ಮತ್ತು 12ನೇ ತರಗತಿಯವರಿಗೆ ಶೇ.50ರಷ್ಟು ವಿದ್ಯಾರ್ಥಿಗಳ ಹಾಜರಾತಿಯಲ್ಲಿ ತರಗತಿಗಳನ್ನು ಆ.2ರಿಂದ ನಡೆಸಲು ತೀರ್ಮಾನಿಸಲಾಗಿದೆ. ಆದರೆ ರಾಜ್ಯ
ಸರ ಕಾ ರದ ತೀರ್ಮಾನವನ್ನು ಹೆತ್ತವರ ಸಂಘಟನೆ ಟೀಕಿಸಿದೆ. ಮಾರ್ಚ್‌ನಿಂದ ಈಚೆಗೆ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪಂಜಾಬ್‌ನಲ್ಲಿ ಕೂಡ 10 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಶಾಲೆ ಶುರುವಾಗಲಿದೆ. ಕೊರೊನಾ ಪ್ರತಿಬಂಧಕ ಕ್ರಮಗಳ ನಡುವೆಯೇ ತರಗತಿಗಳು ನಡೆಯಲಿವೆ. ಬೆಳಗ್ಗೆ 8ರಿಂದ ಅಪ ರಾಹ್ನ 2 ಗಂಟೆಯ ವರೆಗೆ ತರತಿಗಳನ್ನು ನಡೆಸ ಲಾಗುತ್ತದೆ ಎಂದು ರಾಜ್ಯ ಸರ ಕಾ ರ ಪ್ರಕಟಿಸಿದೆ.
ತೆರೆದ ಮೃಗಾಲಯ: ಬರೋಬ್ಬರಿ 105 ದಿನಗಳ ಬಳಿಕ ಹೊಸ ದಿ ಲ್ಲಿಯ ಮೃಗಾಲಯ ವನ್ಯಜೀವಿ ಪ್ರಿಯರಿಗಾಗಿ ತೆರೆದಿದೆ. ಬೆಳಗ್ಗಿನಿಂದಲೇ ಸಾರ್ವಜನಿಕರು ಸಾಲಿನಲ್ಲಿ ನಿಂತು ಟಿಕೆಟ್ ಖರೀದಿಸಿ ವನ್ಯಜೀವಿಗಳನ್ನು ನೋಡಿ ಆನಂದಿಸಿದರು. ದಿಲ್ಲಿ ವಿವಿಯಲ್ಲಿ ಪದವಿ ತರಗತಿಗಳಿಗೆ ನೋಂದಣಿ ಮಾಡಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಒಡಿಶಾದಲ್ಲಿ ಕೂಡ ಸೋಂಕು ನಿಯಮಗಳನ್ನು ಸಡಿಲಿಸಲಾಗಿದೆ.
13 ಕೋಟಿ ಡೋಸ್ ಲಸಿಕೆ: ಕಳೆದ ತಿಂಗಳೊಂದರಲ್ಲಿಯೇ 13 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆಯ ಕೊರತೆ ಇಲ್ಲವೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್ ಮಾಂಡವಿಯಾ ಹೇಳಿದ್ದಾರೆ. ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಲಸಿಕೆ ಕೊರತೆಯಾಗಿದೆ ಎಂದು ಮಾಡಿರುವ ಟ್ವೀಟ್‌ಗೆ ಸಚಿವರು ಪ್ರತ್ಯುತ್ತರ ನೀಡಿದ್ದಾರೆ. ಹಾಲಿ ತಿಂಗಳಿಂದ ಮತ್ತಷ್ಟು ವೇಗದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದ್ದಾರೆ. ದೇಶದ ಆರೋಗ್ಯ ಕಾರ್ಯಕರ್ತರು ಇಂಥ ಸಾಧನೆ ಮಾಡಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಎಲ್ಲರೂ ಅವರನ್ನು ಅಭಿನಂದಿಸುತ್ತಿರುವ ವೇಳೆಯಲ್ಲಿ ರಾಹುಲ್ ಅವರೇ ನೀವೂ ಅಭಿನಂದಿಸಿ ಎಂದು ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
10 ಜಿಲ್ಲೆಗಳಲ್ಲಿ ಇಲ್ಲ ಸೋಂಕು :
ಉತ್ತರ ಪ್ರದೇಶದ ಹತ್ತು ಜಿಲ್ಲೆಗಳಲ್ಲಿ ಸೋಂಕು ಪ್ರಕರಣಗಳು ದೃಢಪಟ್ಟಿಲ್ಲ. ಸಕ್ರಿಯ ಸೋಂಕು ಸಂಖ್ಯೆಯೂ ಕೂಡ ದೃಢಪಟ್ಟಿಲ್ಲ. ಈ ಮೂಲಕ ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ.98.6ಕ್ಕೆ ಏರಿಕೆ ಯಾಗಿದೆ. ಅಲಿಗಢ, ಅನ್ರೋಹಾ, ಇಟಾವಾ, ಫರೂಕಾಬಾದ್, ಹತ್ರಾಸ್, ಕಾಸ್‌ಗಂಜ್, ಕೌಶಾಂಬಿ, ಮಹೋಬ, ಪ್ರತಾಪ್‌ಗ್ಢ, ಶ್ರಾವಸ್ತಿಗಳಲ್ಲಿ ಹೊಸ ಸೋಂಕು ದೃಢಪಟ್ಟಿಲ್ಲ. ಕಳೆದ 24 ಗಂಟೆ ಗಳಲ್ಲಿ 52 ಜಿಲ್ಲೆಗಳಲ್ಲಿ ಹೊಸ ಸೋಂಕು ಪ್ರಕರಣ ದೃಢವಾಗಿಲ್ಲ. 23 ಜಿಲ್ಲೆಗಳಲ್ಲಿ ಒಂದೊಂದು ಸೋಂಕು ದೃಢಪಟ್ಟಿದೆ. ಏಪ್ರಿ ಲ್‌ನಲ್ಲಿ 3,10,783ರಷ್ಟಿದ್ದ ಸಕ್ರಿಯ ಸೋಂಕು ಸದ್ಯ 664ಕ್ಕೆ ಇಳಿಕೆಯಾಗಿದೆ. ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಸೋಂಕು ಸಂಖ್ಯೆ ಅಧಿಕವಾಗಿಯೇ ಇದೆ.