Advertisement

ಗ್ರಾಮಗಳಲ್ಲಿ ಶಾಲೆಗಳು ವಿಶಾಲವಾಗಿ ,ದೇವಸ್ಥಾನಗಳು ಚಿಕ್ಕದಾಗಿರಬೇಕು: ಸಚಿವ ಮಧು ಬಂಗಾರಪ್ಪ

04:08 PM Mar 16, 2024 | Shreeram Nayak |

ಸಾಗರ: ಗ್ರಾಮಗಳಲ್ಲಿ ಶಾಲೆಗಳು ವಿಶಾಲವಾಗಿ ಇರಬೇಕು. ದೇವಸ್ಥಾನಗಳು ಚಿಕ್ಕದಾಗಿರಬೇಕು ಎಂದು ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

Advertisement

ಹುಣಸೂರು, ತಾಳಗುಪ್ಪಗಳಲ್ಲಿ ಎರಡು ಕೋಟಿ ವೆಚ್ಚದ ರಸ್ತೆ ಕಾಮಗಾರಿಗಳನ್ನು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿ ಗೊಣೂರಿನಲ್ಲಿ ಮಾತನಾಡಿದ ಅವರು,ವಿಶಾಲ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಮಕ್ಕಳು ಆಮೇಲೆ ವಿಶಾಲವಾದ ದೇವಸ್ಥಾನ ಕಟ್ಟಿಸುತ್ತಾರೆ. ನಾವು ಅಂಬೇಡ್ಕರ್ ಆಶಯದಂತೆ ಜ್ಞಾನ ಹಂಚುವ ಕೆಲಸ ಮಾಡಬೇಕಿದೆ. ರಾಜ್ಯದ ಎಲ್ಲಾ ಶಾಲೆಗಳು ರಸ್ತೆಗಳು ಸುಸ್ಥಿತಿಗೆ ಬಂದರೆ ಅದು ನಮ್ಮ ಸಾಧನೆಯಾಗುತ್ತದೆ ಎಂದರು.

ಲೋಕಸಭಾ ಚುನಾವಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಗೀತಾ ಶಿವರಾಜಕುಮಾರ್ ಅತ್ಯಧಿಕ ಬಹುಮತದಿಂದ ಗೆಲ್ಲುತ್ತಾರೆ. ಈಶ್ವರಪ್ಪ ಅವರ ಸ್ಪರ್ಧೆ ನಮಗೆ ವಿಷಯವಲ್ಲ. ಅದರಿಂದ ಲಾಭ ನಮ್ಮ ನಿರೀಕ್ಷೆಯೂ ಅಲ್ಲ. ಜನರಿಗೆ ನಮ್ಮ ಗ್ಯಾರಂಟಿ ಶೇ.95 ರಷ್ಟು ತಲುಪಿದೆ. ಈ ಪ್ರಯೋಜನ ಪಡೆದ ಜನರು ನಮಗೆ ಅತ್ಯಧಿಕ ಮತ ನೀಡಿ ಗೆಲ್ಲಿಸುತ್ತಾರೆ ಎಂಬ ಗ್ಯಾರಂಟಿ ಇದೆ. ಶಿಕಾರಿಪುರದಲ್ಲಿ ತಮ್ಮ ವಿರುದ್ಧ ಬಂಡಾಯಕ್ಕೆ ದೇವರು ಒಳ್ಳೆಯದು ಮಾಡಲಿ ಅವರಿಗೆ ಎಂದರು.

ಈ ಸಂಧರ್ಭದಲ್ಲಿ ಪ್ರಥಮವಾಗಿ ಆಗಮಿಸಿದ ಸಚಿವರಿಗೆ ಗ್ರಾಮಸ್ಥರು ಸನ್ಮಾನ ನೆರವೇರಿಸಿದರು. ವೇದಿಕೆಯಲ್ಲಿ ತಲವಾಟ ಗ್ರಾಪಂ ಅಧ್ಯಕ್ಷ ಪ್ರಸನ್ನ ಡಿ.ಎನ್., ಕನ್ನಪ್ಪ, ದೇವಕಿ, ಕಲ್ಪನಾ ತಲಾವಾಟ, ಬಂಗಾರಪ್ಪ, ಶಿವಮೂರ್ತಿ, ಬಂಗಾರಪ್ಪ ಗೊಣೂರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next