ಶುಕ್ರವಾರ ಸರ್ಕಾರಿ ಶಾಲೆಯ ಹಿಂಭಾಗ ಬಾಂಬ್ ಪತ್ತೆಯಾಗಿದ್ದು, ಈ ವೇಳೆ ಶಾಲೆಯಲ್ಲಿ ಸುಮಾರು 400 ಮಕ್ಕಳಿದ್ದರು. ಜೊತೆಗೆ ಅದು ಜನ ವಸತಿ ಪ್ರದೇಶವಾಗಿತ್ತು. ಈ ವೇಳೆ ಪೊಲೀಸರಿಗೆ ಕರೆ ಹೋಗಿದ್ದು ಸ್ಥಳಕ್ಕೆ ಪೊಲೀಸ್ ಪೇದೆ ಅಭಿಶೇಕ್ ಪಟೇಲ್ ಬಂದಿದ್ದರು. ಬಳಿಕ ಅಲ್ಲಿ ಬಾಂಬ್ ವಿಲೇವಾರಿ ಕುರಿತಾಗಿ ಭಾರೀ ಗುಲ್ಲೆದ್ದಿತ್ತು. ಶೀಘ್ರ ಬಾಂಬ್ ನಿಷಿ¢ಯ ತಜ್ಞರು ಲಭ್ಯವಿಲ್ಲದ್ದರಿಂದ ಪೊಲೀಸ್ ಪೇದೆ ತಡೆ ಮಾಡದೇ 40 ವರ್ಷದ ಪಟೇಲ್ ಅವರು ಬಾಂಬ್ ಎತ್ತಿಕೊಂಡು 1 ಕಿ.ಮೀ. ಓಡಿದ್ದಾರೆ. ಜನವಸತಿಯಿಂದ ಆದಷ್ಟು ದೂರಕ್ಕೆ ಬಾಂಬ್ ತೆಗೆದುಕೊಂಡು ಹೋಗಿದ್ದಾರೆ. ಪಟೇಲ್ ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆ ಅವರನ್ನು ಅಭಿನಂದಿಸಿದೆ.
Advertisement
ಆದರೆ ಈ ಬಾಂಬ್ ಎಲ್ಲಿಂದ ಬಂತು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಸನಿಹದಲ್ಲೇ ಸೇನಾ ಸರಹದ್ದು ಇದ್ದು, ಅಲ್ಲಿಂದ ಬಂದು ಬಿದ್ದಿರಬಹುದೇ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಾಗರ್ ಎಂಬಲ್ಲಿನ ಬನ್ನಾದ್ ಹೆಸರಿನ ಗ್ರಾಮದಲ್ಲಿ ಇದೇ ರೀತಿ ಬಾಂಬ್ ಪತ್ತೆಯಾಗಿತ್ತು.