ವಾರಣಸಿ: ತಾನೊಬ್ಬಳು ಹೆಣ್ಣಾಗಿಯೂ ಈ ಶಿಕ್ಷಕಿ ಘೋರ ಅಪರಾಧ ಎಸಗಿದ್ದು, ಹೋಮ್ ವರ್ಕ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿನಿಯರ ಸ್ಕರ್ಟ್ ಬಿಚ್ಚಿಸಿ ಅರೆನಗ್ನಾವಸ್ಥೆಯಲ್ಲೇ ಪರೇಡ್ ನಡೆಸಿ ದ್ರಾಷ್ಟ್ಯ ಮೆರೆದ ಹೇಯ ಘಟನೆ ಉತ್ತರಪ್ರದೇಶದ ಸೋನ್‌ಭದ್ರಾದ ಹೈಸ್ಕೂಲ್‌ನಲ್ಲಿ ನಡೆದಿದೆ.
ವಿದ್ಯಾರ್ಥಿನಿಯರ ಜೂನಿಯರ್ ಹೈಸ್ಕೂಲ್ ನಲ್ಲಿ ಮೀನಾ ಸಿಂಗ್ ಎಂಬ ಶಿಕ್ಷಕಿ 8 ನೇ ತರಗತಿಯ ವಿದ್ಯಾರ್ಥಿನಿಯರ ಸ್ಕರ್ಟ್ ಬಿಚ್ಚಿಸಿ ಶಾಲಾ ಕಂಪೌಂಡ್‌ದನಲ್ಲಿ 2 ಗಂಟೆಗಳ ಕಾಲ ಪರೇಡ್ ನಡೆಸಿದ್ದಾಳೆ ಮಾತ್ರವಲ್ಲದೆ ಮೊಬೈಲ್‌ನಲ್ಲಿ ವಿದ್ಯಾರ್ಥಿನಿಯರ ಫೋಟೋಗಳನ್ನೂ ಕ್ಲಿಕ್ಕಿಸಿಕೊಂಡಿದ್ದಾಳೆ.
ಇನ್ಮುಂದೆ ಹೋಮ್ ವರ್ಕ್ ಮಾಡದಿದ್ದರೆ ಈ ವಿಡಿಯೋವನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ವಿದ್ಯಾರ್ಥಿನಿಯರು ಪೋಷಕರ ಬಳಿ ನೋವು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪೋಷಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದು, ತಕ್ಷಣಕ್ಕೆ ಅನ್ವಯವಾಗುವಂತೆ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ. ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.