Advertisement
ಬಿಹಾರದ 20,000 ಸರಕಾರಿ ಶಾಲೆಗಳ ವಿದ್ಯಾರ್ಥಿಗಳು ಶೀಘ್ರದಲ್ಲೇ ಸಾವಯವ ತರಕಾರಿಗಳು ಮತ್ತು ಹಣ್ಣುಗಳನ್ನು ಮಧ್ಯಾಹ್ನದ ಊಟಕ್ಕೆ ಬೆಳೆಯಲಿದ್ದಾರೆ. ಬಿಹಾರದ ಪೂರ್ಣಿಯಾ ಜಿಲ್ಲೆಯ 100 ಶಾಲೆಗಳಲ್ಲಿ ಯಶಸ್ವಿ ಪ್ರಾಯೋಗಿಕ ಯೋಜನೆಯ ಅನಂತರ ರಾಜ್ಯವು ಅನೌಪಚಾರಿಕವಾಗಿ ಯೋಜನೆಯನ್ನು 4,000 ಶಾಲೆಗಳಿಗೆ ವಿಸ್ತರಿಸಿದೆ. ಈ ಯೋಜನೆಗೆ ಧನಸಹಾಯ ನೀಡಲು ಕೇಂದ್ರ ಸರಕಾರವೂ ಒಪ್ಪಿಗೆ ನೀಡಿದೆ. 75 ಶಾಲೆಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಯಲು ಉಪಕರಣಗಳು, ಬೀಜಗಳು ಮತ್ತು ಸಸಿಗಳನ್ನು ಖರೀದಿಸಲು ಪ್ರತಿ ಶಾಲೆಗೆ 5,000 ರೂ. ನೀಡಲಾಗುತ್ತಿದೆ. ಈ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಕಡಬ ತಾಲೂಕಿನ ಗ್ರಾಮೀಣ ಭಾಗವಾದ ಪುಣcಪ್ಪಾಡಿ ಶಾಲೆಯಿಂದ ಅಂತಹದ್ದೇ ಸುದ್ದಿಯೊಂದು ಬಂದಿದೆ. ಇದು ಶಾಲೆಯವರೇ ಮಾಡಿರುವ ಪ್ರಯತ್ನ.
ಪುಣcಪ್ಪಾಡಿ ಶಾಲೆಯ ಪ್ರೀತಿಯ ಬೆಣ್ಣೆ ಹಣ್ಣಿನ ಮರ ತನ್ನ ಮೈತುಂಬಾ ಕಾಯಿಗಳನ್ನು ಬಿಟ್ಟು ತೂಗಿದೆ. ಜೂನ್ ತಿಂಗಳ ಆರಂಭದಿಂದಲೂ ನಮ್ಮ ಮಕ್ಕಳಿಗೆ ಈ ಬೆಣ್ಣೆ ಹಣ್ಣುಗಳ ಮೇಲೆಯೇ ಆಕರ್ಷಣೆ. ಮರದಡಿಗೆ ಹೋಗಿ ಹಣ್ಣುಗಳನ್ನು ಮುಟ್ಟಿ ಲೆಕ್ಕ ಮಾಡದಿದ್ದರೆ ಆ ದಿನ ಮಕ್ಕಳಿಗೆ ಪೂರ್ಣವಾಗುವುದಿಲ್ಲ. ಬೆಳೆಯುವ ಪ್ರತೀ ಹಂತವನ್ನು ಮಕ್ಕಳು ಸಂಭ್ರಮಿಸಿದರು.
Related Articles
ಅಂತೂ ಕಾಯಿಗಳೂ ಬಲಿತು ಅವುಗಳನ್ನು ಕೊಯ್ದದ್ದೂ ಆಯಿತು. ಬುಟ್ಟಿ ತುಂಬಿದ ಕಾಯಿಗಳು ಇದ್ದುದು 1 ಕ್ವಿಂಟಾಲ್ ನಷ್ಟು. ಎಲ್ಲ ಮಕ್ಕಳಿಗೆ, ಮಕ್ಕಳ ಮನೆಗೂ ಹಂಚಿ ಉಳಿದುದನ್ನು ಶಾಲಾಭಿವೃದ್ಧಿಯ ಸಲುವಾಗಿ ಮಾರಾಟ ಮಾಡಲಾಯಿತು. ಶಾಲೆಗೆ ಕೊಂಚ ಆದಾಯವೂ ಆಯಿತು.
Advertisement
ಪೌಷ್ಟಿಕ ಆಹಾರಕಳೆದ ವರ್ಷವೂ ಬೆಣ್ಣೆ ಹಣ್ಣು ಮಕ್ಕಳಿಗೆ ಇಷ್ಟವಾಗಿತ್ತು. ಹಣ್ಣಾದಾಗ ಅದನ್ನು ಮಕ್ಕಳು ತಿನ್ನುವ ಸಂಭ್ರಮ ನೋಡುವುದೇ ಆನಂದ. ಈ ಮೂಲಕ ಮಕ್ಕಳಿಗೆ ಪೌಷ್ಟಿಕ ಆಹಾರವೂ ಲಭ್ಯವಾದಂತಾಗುತ್ತದೆ
– ರಶ್ಮಿತಾ ನರಿಮೊಗರು, ಶಾಲೆಯ ಮುಖ್ಯ ಶಿಕ್ಷಕಿ