Advertisement
ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಈ ಬಗ್ಗೆ ಸುಳಿವು ನೀಡಿದ್ದಾರೆ. ಮೊದಲಿಗೆ 6ರಿಂದ 8ನೇ ತರಗತಿ ಆರಂಭಿಸಿ, ಮಕ್ಕಳು ಮತ್ತು ಹೆತ್ತವರ ಪ್ರತಿಕ್ರಿಯೆ ಆಧರಿಸಿ, 15 ದಿನಗಳ ಅನಂತರ 1ರಿಂದ 5ನೇ ತರಗತಿ ಆರಂಭಿಸುವ ಯೋಚನೆ ಯಿದೆ ಎಂದು ಸಚಿವರು ಹೇಳಿದ್ದಾರೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವ ದಲ್ಲಿ ಸೋಮವಾರ ನಡೆಯುವ ತಜ್ಞರ ಸಮಿತಿ ಸಭೆ ಯಲ್ಲಿ ಈ ಕುರಿತು ನಿರ್ಣಯ ಹೊರ ಬೀಳುವ ಸಾಧ್ಯತೆಯಿದೆ ಎಂದೂ ತಿಳಿಸಿದ್ದಾರೆ.
Related Articles
Advertisement
ಈಗಾಗಲೇ 9ರಿಂದ 12ನೇ ತರಗತಿ ಪ್ರಾರಂಭ ವಾಗಿದೆ. ಮಕ್ಕಳು ಉತ್ಸಾಹದಿಂದ ಆಗ ಮಿಸು ತ್ತಿದ್ದಾರೆ. ಅನೇಕ ಶಾಲೆಗಳಿಗೆ ಸ್ವತಃ ಭೇಟಿ ನೀಡಿದ್ದು, ಬಹುತೇಕ ವಿದ್ಯಾರ್ಥಿಗಳು ಶಾಲೆ ಸಂಪೂರ್ಣ ವಾಗಿ ಆರಂಭಿಸುವಂತೆ ಕೋರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯವಿಲ್ಲದೆ ನಿರ್ಣಯ ತೆಗೆದುಕೊಳ್ಳುವ ಪ್ರಯತ್ನ ಮಾಡಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಸೆ. 6ರಿಂದಲೇ ತರಗತಿ ಆರಂಭ? :
9ರಿಂದ 12ನೇ ತರಗತಿವರೆಗೆ ಶಾಲೆ- ಕಾಲೇಜು ಆರಂಭವಾಗಿದೆ. ಗ್ರಾಮೀಣ ಭಾಗ ದಲ್ಲಿ ಸರಾಸರಿ ಶೇ. 65ಕ್ಕೂ ಅಧಿಕ ಹಾಜರಾತಿ ಇದ್ದು, ನಗರ ಭಾಗದಲ್ಲಿ ಸ್ವಲ್ಪ ಕಡಿಮೆಯಿದೆ. ಉಳಿದ ತರಗತಿಗಳನ್ನು ಆರಂಭಿಸಲು ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಅನಂತರ ಅಥವಾ ಸೆಪ್ಟಂಬರ್ 6ರಿಂದಲೇ ಉಳಿದ ತರಗತಿಗಳನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ನಿರ್ವಹಣೆಗೆ ಸಮಸ್ಯೆ ಇಲ್ಲ. ಸುಮಾರು 10 ಸಾವಿರ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಇಂತಲ್ಲಿ ನಿರ್ವಹಣೆ ಸ್ವಲ್ಪ ಕಷ್ಟ. ಆಗ ಪಾಳಿ ಪದ್ಧತಿ ಅಥವಾ ಬೇರೆ ಯಾವುದಾದರೂ ವಿಧಾನದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಒಟ್ಟಾರೆಯಾಗಿ ತಾಂತ್ರಿಕ ಸಲಹಾ ಸಮಿತಿ ನೀಡುವ ಅಭಿಪ್ರಾಯ ಮತ್ತು ಮಾರ್ಗಸೂಚಿಯಂತೆ ಶಾಲೆಗಳು ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು.
ಸಾರ್ವಜನಿಕ ಗಣೇಶೋತ್ಸವ: ಇಂದು ನಿರ್ಧಾರ? :
ಸಾರ್ವಜನಿಕ ಗಣೇಶೋತ್ಸವ ಆಚರಣೆ ಕುರಿತು ಸೋಮವಾರ ನಿರ್ಧಾರ ಹೊರಬೀಳುವ ಸಾಧ್ಯತೆ ಯಿದೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ತಜ್ಞರ ಸಮಿತಿ ಸಭೆ ನಡೆಯಲಿದ್ದು, ಗಣೇಶೋತ್ಸವ ಆಚರಣೆಯ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸರಕಾರ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ನಿಷೇಧ ಹೇರಿ, ಮನೆಗಳಲ್ಲಿ ಮಾತ್ರ ಆಚರಣೆಗೆ ಅವಕಾಶ ನೀಡಿದ್ದು, ಈ ಬಗ್ಗೆ ಬಿಜೆಪಿ ಯಿಂದಲೇ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಬೇಕೆಂಬ ಬೇಡಿಕೆ ಇದೆ.
ಖಾಸಗಿ ಶಾಲೆಗಳ ಶುಲ್ಕದ ವಿಚಾರವಾಗಿ ಮುಖ್ಯ ಮಂತ್ರಿಯವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸಿ, ಆದಷ್ಟು ಬೇಗ ತೀರ್ಮಾನ ತೆಗೆದುಕೊಳ್ಳುವ ಪ್ರಯತ್ನ ಮಾಡಲಾಗುತ್ತದೆ. –ಬಿ.ಸಿ. ನಾಗೇಶ್, ಶಿಕ್ಷಣ ಸಚಿವ