Advertisement

ಆಗಸ್ಟ್‌ವರೆಗೆ ಶಾಲೆ ಆರಂಭ ಬೇಡ

07:02 AM Jun 12, 2020 | Team Udayavani |

ವಿಜಯಪುರ: ಪಟ್ಟಣ ಸಮೀಪದ ನಾರಾಯಣಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಭೆಯಲ್ಲಿ ಪೋಷಕರು ಕೊರೊನಾ ನಿಯಂತ್ರಣಕ್ಕೆ ಬರುವವರೆಗೆ ಶಾಲೆ ಬೇಡ ಎಂಬ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಶಾಲೆ ಆರಂಭಿಸುವ ಬಗ್ಗೆ ಪೋಷಕರ  ಅಭಿಪ್ರಾಯ ಸಂಗ್ರಹಿಸಲು ಸರ್ಕಾರದ ಆದೇಶದಂತೆ ಏರ್ಪಡಿಸಿದ್ದ ಎಸ್‌ ಡಿಎಂಸಿ ಮತ್ತು ಪೋಷಕರ ಸಭೆಯಲ್ಲಿ ಮಾತನಾಡಿದ ಪೋಷಕರು, ಆಗಸ್ಟ್‌ ವರೆಗೆ ಶಾಲೆ ಬೇಡ. ಮಕ್ಕಳ  ಜೀವದೊಂದಿದೆ  ಹುಡುಗಾಟ ಬೇಡ. ಒಂದು ವೇಳೆ ಶಾಲೆ ಆರಂಭಿಸಿದರೆ, ಸರ್ಕಾರವೇ ಎಲ್ಲ ಸುರಕ್ಷಿತ ಕ್ರಮ ನಿರ್ವಹಿಸಬೇಕು.

ಪ್ರತ್ಯೇಕ ಆಸನದ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ವೈದ್ಯಕೀಯ ರಕ್ಷಣೆ ವ್ಯವಸ್ಥೆ ಮಾಡುವ ಜವಾಬ್ದಾರಿ ನಿರ್ವಹಣೆ  ಮಾಡಬೇಕು. ಪ್ರಾಥಮಿಕ ಶಾಲಾ ಮಕ್ಕಳಿಗೆ ಆನ್‌ಲೈನ್‌ ಪಾಠ ಬೇಡ ಎಂದರು. ಪದೋನ್ನತ ಮುಖ್ಯ ಶಿಕ್ಷಕ ಚಂದ್ರಶೇಖರ್‌ ಹಡಪದ ಮಾತನಾಡಿ, ಸರ್ಕಾರದ ಆದೇಶ ಮತ್ತು ಕ್ರಿಯಾ ಯೋಜನೆಗಳ ಬಗ್ಗೆ ಸಭೆಯಲ್ಲಿ ಹಾಜರಾದವರಿಗೆ ವಿವರಣೆ ನೀಡಿದರು.

“ನನ್ನ ಶಾಲೆ ನನ್ನ ಕೊಡುಗೆ’ ಕಾರ್ಯಕ್ರಮದಡಿಯಲ್ಲಿ ಶಾಲಾ ಅಗತ್ಯ ಮಂಡಿಸಿದರು. ನಾರಾಯಣಪುರ, ಗೊಲ್ಲಹಳ್ಳಿ, ಡಿ.ಹೊಸೂರು, ಗೋಣೂರು, ಜಿ.ಹೊಸಹಳ್ಳಿ, ದೊಡ್ಡಮುದ್ದೇನಹಳ್ಳಿ ಗ್ರಾಮದ ಪೋಷಕರು ಭಾಗವಹಿಸಿ ಸಲಹೆ  ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಸುಧಾಕರ್‌, ಅಂಗನವಾಡಿ ಕಾರ್ಯಕರ್ತೆ ಕವಿತಾ, ಆಶಾ ಕಾರ್ಯಕರ್ತೆ ಲಕ್ಷ್ಮೀದೇವಿ, ಸಹ ಶಿಕ್ಷಕ ಎ.ಬಿ.ಪರಮೇಶಯ್ಯ, ಪಿ.ನಾಗೇಶ್‌, ರವಿಚಂದ್ರನ್‌ ಎನ್‌. ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next