ಮಾಸ್ಕೋ: ಮಧ್ಯ ರಷ್ಯಾದ ಶಾಲೆಯೊಂದರಲ್ಲಿ ಸೋಮವಾರ ಬಂದೂಕುಧಾರಿಯೊಬ್ಬ ಏಳು ಮಕ್ಕಳು ಸೇರಿದಂತೆ 13 ಜನರನ್ನು ಕೊಂದು 21 ಜನರನ್ನು ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಷ್ಯಾದ ತನಿಖಾ ಸಮಿತಿಯು ಮಾಸ್ಕೋದಿಂದ ಪೂರ್ವಕ್ಕೆ 960 ಕಿಲೋಮೀಟರ್ (600 ಮೈಲುಗಳು) ಉಡ್ಮುರ್ಟಿಯಾ ಪ್ರದೇಶದ ಇಝೆವ್ಸ್ಕ್‌ನಲ್ಲಿರುವ ಶಾಲೆಯೊಂದರಲ್ಲಿ ಗುಂಡಿನ ದಾಳಿ ನಡೆದಿದೆ ಎಂದು ಹೇಳಿದೆ. ಗಾಯಗೊಂಡವರಲ್ಲಿ 14 ಮಕ್ಕಳು ಸೇರಿದ್ದಾರೆ ಎಂದು ಸಮಿತಿ ತಿಳಿಸಿದೆ.
ಇದನ್ನೂ ಓದಿ : ಹಿಂದುತ್ವ ಎನ್ನುವುದು ಧರ್ಮವಲ್ಲ ಅದು ಜೀವನ ವಿಧಾನ: ಮೋಹನ್ ಭಾಗವತ್
ಉಡ್ಮುರ್ತಿಯ ಗವರ್ನರ್ ಅಲೆಕ್ಸಾಂಡರ್ ಬ್ರೆಚಲೋವ್ ವಿಡಿಯೋ ಹೇಳಿಕೆಯಲ್ಲಿ ಬಂದೂಕುಧಾರಿ ಕೃತ್ಯದ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ ಎಂದು ಹೇಳಿದ್ದಾರೆ. ಶಾಲೆಯು 1 ರಿಂದ 11 ನೇ ತರಗತಿಯವರೆಗಿನ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮೂಲಗಳು ತಿಳಿಸಿವೆ. ಉಳಿದ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸ್ಥಳಾಂತರಿಸಲಾಗಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ.