ನೆಲಮಂಗಲ: ಬಾಗಿಲು ಮುಚ್ಚಿರುವ ಸರ್ಕಾರಿ ಕನ್ನಡ ಶಾಲೆ ಮತ್ತೆ ಪುನಾರಾರಂಭಿಸಲು ಗ್ರಾಮಸ್ಥರು ಬೆಂಬಲ ನೀಡಿದರೆ, ಇಲಾಖೆ ಸಹಕಾರ ನೀಡಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ ರಮೇಶ್ ಭರವಸೆ ನೀಡಿದರು.
ತಾಲೂಕಿನ ಸೋಲದೇವನಹಳ್ಳಿಯ ಗಡಿಗ್ರಾಮವಾದ ಹುಣಸೇ ಘಟ್ಟ ಪಾಳ್ಯದಲ್ಲಿ ಮಕ್ಕಳಿ ಲ್ಲದ ಕಾರಣಕ್ಕೆ ಹತ್ತು ವರ್ಷದಿಂದ ಬಾಗಿಲು ಮುಚ್ಚಿದ್ದ ಶಾಲೆ ಪುನಾರಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹತ್ತು ವರ್ಷದಿಂದ ಯಾವ ಕಾರಣಕ್ಕೆ ಶಾಲೆ ಆರಂಭವಾಗಿಲ್ಲ ಎಂಬುದು ಗೊತ್ತಿಲ್ಲ. ಈ ಹಿಂದಿನ ಮಕ್ಕಳ ಪರಿಸ್ಥಿತಿ ನಿಜಕ್ಕೂ ಆತಂಕ ಸೃಷ್ಟಿಸುತ್ತದೆ. ಗ್ರಾಮದ ಜನರು ಭೇಟಿ ಮಾಡಿ ಕೇಳುತ್ತಿದ್ದಂತೆ ಇಲಾಖೆಯಿಂದ ಎಲ್ಲ ಸಹಕಾ ರ ವನ್ನು ನೀಡಿ ಶಾಲೆ ಪುನಾ ರಂಭ ಮಾಡಲಾಗಿದೆ ಎಂದರು.
6 ವಿದ್ಯಾ ರ್ಥಿ ದಾಖಲು: ಗ್ರಾಪಂ ಮಾಜಿ ಸದಸ್ಯ ಹನುಮಂತ ರಾಜು ಮಾತನಾಡಿ, ಮಕ್ಕಳಿಲ್ಲದ ಕಾರಣಕ್ಕೆ ಹತ್ತು ವರ್ಷದ ಹಿಂದೆ ಕನ್ನಡ ಸ ರ್ಕಾರಿ ಶಾಲೆ ಬಾಗಿಲಿಗೆ ಬೀಗ ಹಾಕಲಾಗಿತ್ತು. ಅನಂತರ ಒಂದೆರಡು ವರ್ಷ ದಲ್ಲಿ ಮಕ್ಕಳಸಂಖ್ಯೆ ಹೆಚ್ಚಿಗೆಯಾದರೂ, ಗ್ರಾಮ ದಲ್ಲಿ ಶಾಲೆ ಆರಂಭ ವಾ ಗಲು ಸಾಧ್ಯ ವಾ ಗದೇ ಪಕ್ಕದ ಗ್ರಾಮದ ಶಾಲೆಗೆ 2 ಕಿ.ಮೀ.ನಷ್ಟು ಕಾಡಿನ ರಸ್ತೆ ಯಲ್ಲಿ ನಡೆ ದು ಕೊಂಡು ಹೋಗುವ ಅನಿ ವಾ ರ್ಯತೆ ಮಕ್ಕ ಳಿಗೆ ಬಂದಿತ್ತು. ಸ್ಥಳೀಯ ಮುಖಂಡರು ಹಾಗೂ ಗ್ರಾಮ ಸ್ಥರ ಒತ್ತಾ ಯ ದಿಂದ ಮತ್ತೆ ಶಾಲೆ ಪುನಾ ರಾಂಭ ವಾ ಗಿದ್ದು, 6 ವಿದ್ಯಾ ರ್ಥಿ ಗ ಳು ದಾಖ ಲಾಗಿ ದ್ದಾರೆ ಎಂದ ರು. ಒಮ್ಮ ತದ ನಿರ್ಧಾರ: ಹುಣ ಸೇ ಘ ಟ್ಟ ಪಾ ಳ್ಯ ಗ್ರಾಮದ ಮಕ್ಕಳಿಗೆ ಆತಂಕ ವಿ ಲ್ಲದ ಶಿಕ್ಷಣ ನೀಡುವ ಸಲು ವಾಗಿ ಸ್ಥಳೀಯ ಮುಖಂಡ ವೀರ ಮಾ ರೇ ಗೌ ಡ, ಚನ್ನೇಗೌಡ, ಹನುಮಂತ ರಾಜು, ಶ್ರೀನಿವಾಸ್, ಶಂಕರಪ್ಪ, ರವಿ ಕುಮಾರ್, ಮಂಜು ನಾ ಥ್, ಕೆಂಪೇ ಗೌಡ ಹಾಗೂ ಶಾಲೆಯ ಭೂದಾನಿ ಕಲ್ಲಯ್ಯ ಹನು ಮ ಕ್ಕ ನ ವರ ಪರಿಶ್ರಮ ಹಾಗೂ ಒಮ್ಮ ತದ ನಿರ್ಧಾ ರ ದಿಂದ ಶಾಲೆ ಕಟ್ಟಡ, ಅಡುಗೆ ಮನೆ ಕೊಠಡಿಗಳನ್ನು ಸಿದ್ಧಪ ಡಿಸಿ ಶಾಲೆಯ ಆರಂಭಿ ಸಿದ್ದು ಸಾಕಷ್ಟು ಅಭಿವೃದ್ಧಿಯ ಕನಸು ಕಂಡಿದ್ದಾರೆ.
ಶಿ ಕ್ಷಣ ಸಂಯೋಜಕ ನರಸಿಂಹಯ್ಯ, ಅಕ್ಷರದಾಸೋ ಹದ ಶಿವ ಕು ಮಾ ರ್, ಸೋ ಲ ದೇ ವ ನ ಹಳ್ಳಿ ಗ್ರಾಪಂ ಅಧ್ಯಕ್ಷೆ ಪುಷ್ಪಾ , ಉಪಾಧ್ಯಕ್ಷೆಪುಟ್ಟಮ್ಮ, ಸದಸ್ಯ ಸಂದೀಪ್ ಕುಮಾರ್, ಮುನಿರಾಜು, ಶ್ರೀನಿವಾಸ್, ಸವಿತಾ, ಭಾಗ್ಯಮ್ಮ, ಮುಖಂಡ ವೀರಮಾರೇ ಗೌಡ್ರು, ಹನುಮಂತ ರಾಜು,ಕಲ್ಲಯ್ಯ, ಮಂಜುನಾಥ್, ಶಂಕ ರಪ್ಪ, ಚನ್ನೇಗೌಡ, ರವಿ, ರಾಜಣ್ಣ,ಸಿಆ ರ್ ಪಿ ಶೋಭಾ, ಮಾಜಿ ಸಿಆ ರ್‌ಪಿ ರವಿ, ಮು ಖ್ಯ ಶಿ ಕ್ಷಕಿ ನಾಗ ರ ತ್ನಮ್ಮ ಇದ್ದರು. ,