ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲೂಕಿನ ಬರಗೂರು ಕ್ಲಸ್ಟರ್ ವ್ಯಾಪ್ತಿಯ ಯರೆಕಟ್ಟೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 10 ವರ್ಷದ ನಂತರ ಈಗ ಪುನಾರಂಭವಾಗಿದೆ.
ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಪೋಷಕರು ಒಳಗಾಗಿ ತಮ್ಮ ಮಕ್ಕಳನ್ನು ದೂರದ ಕಾನ್ವೆಂಟ್‌ಗೆದಾಖಲಿಸಿದ್ದರು. ಪರಿಣಾಮ ಯರೆಕಟ್ಟೆ ಶಾಲೆಯಮಕ್ಕಳ ಸಂಖ್ಯೆ 2ಕ್ಕೆ ಕುಸಿದಿತ್ತು. ಮಕ್ಕಳ ದಾಖಲಾತಿ ಕ್ಷಿಣಿಸಿದೆ ಎಂಬ ನೆಪದಲ್ಲಿ 10 ವರ್ಷದ ಹಿಂದೆ ಶಾಲೆಯನ್ನು ಮುಚ್ಚಲಾಗಿತ್ತು. ಅಲ್ಲದೆ, ಶಾಲೆಯಲ್ಲಿ ದಾಖಲಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಪಕ್ಕದಬರಗೂರು ಸರ್ಕಾರಿ ಶಾಲೆಗೆ ವರ್ಗಾವಣೆಮಾಡಲಾಗಿತ್ತು. ಪರಿಣಾಮ ಪಕ್ಕದ ಊರಿಗೆ ನಡೆದುಕೊಂಡು ಹೋಗಿ ಶಿಕ್ಷಣ ಕಲಿಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಪೋಷಕರ ಮನವೊಲಿಕೆ: ನಿತ್ಯ ಶಾಲೆಗೆ ಮಕ್ಕಳು ಹೋಗುವ ಕಷ್ಟವನ್ನು ನೋಡಲಾರದೆ ಯರೆಕಟ್ಟೆ ಗ್ರಾಮದ ಕೆಲವು ಯುವಕರು ಗ್ರಾಮದಲ್ಲಿ ಸಭೆ ನಡೆಸಿ ತಮ್ಮೂರಿನ ಶಾಲೆಯನ್ನು ಮತ್ತೆ ಪ್ರಾರಂಭಿ ಸುವ ಪಣತೊಟ್ಟರು. ಪೋಷಕರ ಮನೆಮನೆಗೆ ತೆರಳಿ ತಮ್ಮೂರ ಸರ್ಕಾರಿ ಶಾಲೆಗೆ ಮಕ್ಕಳನ್ನುದಾಖಲಿಸುವಂತೆ ಮನವೊಲಿಸುವ ಪ್ರಯತ್ನ ಸಹ ಮಾಡಿದರು. ಪರಿಣಾಮ 1ರಿಂದ 5ನೇ ತರಗತಿವರೆಗೆ 17 ವಿದ್ಯಾರ್ಥಿಗಳು ದಾಖಲಾದರು.
ಶಾಲೆಯಲ್ಲಿ ಮಕ್ಕಳ ಕಲರವ: ಶಾಲೆಯಲ್ಲಿ ದಾಖಲಾತಿ ಹೆಚ್ಚಿರುವುದರಿಂದ ಸಹಜವಾಗಿ ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ಶಾಲೆ ಆರಂಭಕ್ಕೆ ಹಸಿರು ನಿಶಾನೆ ತೋರಿತು. ಹಾಗಾಗಿ, ಗ್ರಾಮಸ್ಥರ ಸಹಕಾರದೊಂದಿಗೆ ಶಾಲೆ ಪುನಾರಂಭಆಗಿದ್ದು ಹತ್ತು ವರ್ಷಗಳಿಂದ ಬಣಗೊಡುತ್ತಿದ್ದ ಶಾಲೆಯಲ್ಲಿ ಮಕ್ಕಳ ಕಲರವ ಶುರುವಾಗಿದೆ.
ಶಾಲೆಯ ಪುನಾರಂಭ ಸಂದರ್ಭದಲ್ಲಿ ಬರಗೂರು ಗ್ರಾಪಂ ಉಪಾಧ್ಯಕ್ಷೆ ದಿವ್ಯಾ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ಬಿ.ಎನ್. ಮಂಜುನಾಥ್,ಯುವ ಹೋರಾಟಗಾರ ಯರೇಕಟ್ಟೆದೇವರಾಜ್, ಗ್ರಾಮದ ಹಿರಿಯ ನರಸಿಂಹಯ್ಯ, ಹಿರಿಯ ಹೋರಾಟಗಾರ ಇಂದ್ರಯ್ಯ,ಮಂಜುನಾಥ, ರಾಜು ಅರಸ್, ಬಿಆರ್‌ಸಿದುರ್ಗಯ್ಯ, ಸಿಆರ್‌ಪಿ ಕೆ.ಎಸ್.ನಾಗರಾಜು ಹಾಗೂ ಮತ್ತಿತರರು ಇದ್ದರು.
ಮುಚ್ಚಿರುವ ಶಾಲೆ ತರೆಯಲು ಯತ್ನ : ಸಾರ್ವಜನಿಕರು ಸರ್ಕಾರಿ ಸವಲತ್ತು ಸದ್ಬಳಕೆ ಮಾಡಿಕೊಳ್ಳುವುದರಿಂದ ವಿನಃ ಕಾರಣ ಮಾಡುವ ಖರ್ಚು ಉಳಿಯುತ್ತದೆ. ಈ ಬಗ್ಗೆ ಯರೆಹಳ್ಳಿ ಪೋಷಕರಿಗೆ ಮನವರಿಕೆ ಮಾಡಿದಫಲ 10 ವರ್ಷದ ನಂತರ ಶಾಲೆ ಆರಂಭವಾಗಿದೆ. ಇದೇ ರೀತಿ ತಾಲೂಕಿನಲ್ಲಿ ಮುಚ್ಚಿರುವ ಶಾಲೆಗಳನ್ನು ಪುನಃ ಆರಂಭಿಸಲು ಶ್ರಮಿಸುತ್ತೇವೆ. ಅಲ್ಲದೆ, ಮುಚ್ಚಿದ ಶಾಲೆ ಆರಂಭಿಸಿರುವಶಿಕ್ಷಣ ಇಲಾಖೆಗೆ ಅಭಾರಿಯಾಗಿದ್ದೇನೆ ಎಂದುಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಜಿಲ್ಲಾ ಕಾರ್ಯದರ್ಶಿ ಬೆಳುಗುಲಿ ಮಂಜುನಾಥ್ ಹೇಳಿದರು.